ರಾಷ್ಟ್ರೀಯ

ತಮಿಳುನಾಡು ರಾಜ್ಯಪಾಲರ ಭೇಟಿ: ಸರ್ಕಾರ ರಚನೆಯ ಹಕ್ಕು ಮಂಡಿಸಿದ ಜಯಾ

Pinterest LinkedIn Tumblr

Jayalalithaಚೆನ್ನೈ (ಪಿಟಿಐ): ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು ಶನಿವಾರ ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರನ್ನು ಭೇಟಿ ಮಾಡಿ ಔಪಚಾರಿಕವಾಗಿ ನೂತನ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.
ಜಯಾ ಅವರು ಶುಕ್ರವಾರವಷ್ಟೇ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದರು.
ಮೇ 23ರಂದು ಸೋಮವಾರ ಮದ್ರಾಸ್ ವಿಶ್ವವಿದ್ಯಾಲಯದ ಶತಮಾನೋತ್ಸವ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಗಳಿವೆ.
ಮೇ 16ರಂದು ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಜಯಾ ಅವರ ಪಕ್ಷವು 134 ಸ್ಥಾನಗಳನ್ನು ಗೆದ್ದಿತ್ತು. ಡಿಎಂಕೆ ಪಕ್ಷವು 89 ಸ್ಥಾನಗಳನ್ನು ಜಯಿಸಿತ್ತು. ಕಾಂಗ್ರೆಸ್ 8 ಹಾಗೂ ಐಯುಎಂಎಲ್‌ 1 ಸ್ಥಾನ ಜಯಿಸಿದ್ದವು.
‌1984ರ ಬಳಿಕ ಆಡಳಿತಾರೂಢ ಸರ್ಕಾರ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದು ಇದೇ ಮೊದಲು. ಡಿಎಂಕೆ ಹಾಗೂ ಎಐಎಡಿಎಂಕೆ ತಲಾ ಒಂದೊಂದು ಬಾರಿ ಅಧಿಕಾರಕ್ಕೆ ಬರುವುದು ತಮಿಳುನಾಡಿನಲ್ಲಿ ರಾಜಕೀಯ ಸಂಪ್ರದಾಯವೇ ಆಗಿತ್ತು. ಆದರೆ, ಈ ಬಾರಿ ತಮಿಳುನಾಡಿನ ಮತದಾರರು ಆ ಸಂಪ್ರದಾಯವನ್ನು ಮೀರಿ ಮತಚಲಾಯಿಸಿದ್ದಾರೆ.

Comments are closed.