ಗಲ್ಫ್

ಕತಾರ್ ಗೆ ಜೂನ್ 4ರಿಂದ ಎರಡು ದಿನಗಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತೈಲ ಸಮೃದ್ಧ ಕತಾರ್ ಗೆ ಜೂನ್ 4ರಿಂದ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಜೂನ್ 4ರಂದು ಕತಾರ್ ಗೆ ಪ್ರಯಾಣ ಬೆಳೆಸಲಿರುವ ಮೋದಿ, ಭಾರತ-ಕತಾರ್ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಅಲ್ಲಿನ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಿದ್ದಾರೆ.

2008ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ದೋಹಾಕ್ಕೆ ಭೇಟಿ ನೀಡಿದ ಬಳಿಕ ಭಾರತದ ಪ್ರಧಾನಿ ಕತಾರ್ ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಮೋದಿಯವರು ಈ ಭೇಟಿ ಸಂದರ್ಭದಲ್ಲಿ ಖತಾರ್ ಅಮೀರ ಶೇಖ್ ತಮೀಮ್ ಬಿನ್ ಹಮದ್ ಅಲ್-ಥನಿ ಅವರ ಜೊತೆಗೆ ವಿಶೇಷವಾಗಿ ಹೈಡ್ರೋಕಾರ್ಬನ್ ರಂಗದಲ್ಲಿ ಆರ್ಥಿಕ ಬಾಂಧವ್ಯ ವೃದ್ಧಿಸಿಕೊಳ್ಳುವ ಬಗ್ಗೆ ಸುದೀರ್ಘ ಮಾತುಕತೆ ನಡೆಸಲಿದ್ದಾರೆ. ಪರಸ್ಪರರಿಗೆ ಸಂಬಂಧಿಸಿದ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಬಗೆಗೂ ರ್ಚಚಿಸಲಿದ್ದಾರೆ ಎನ್ನಲಾಗಿದೆ.

Comments are closed.