ರಾಷ್ಟ್ರೀಯ

ಅಸ್ಸಾಂ ಜನಾದೇಶಕ್ಕೆ ಬಿಜೆಪಿ ಹರ್ಷ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ

Pinterest LinkedIn Tumblr

BJP-@-Aಗುವಾಹಟಿ (ಪಿಟಿಐ): ಅಸ್ಸಾಂನಲ್ಲಿ ಕಮಲ ಅರಳುವ ಸಾಧ್ಯತೆ ಗೋಚರಿಸಿದ ಬೆನ್ನಲ್ಲೆ ಬಿಜೆಪಿ ಹರ್ಷ ವ್ಯಕ್ತಪಡಿಸಿದೆ.

‘ಅಸ್ಸಾಂ ಚುನಾವಣೆ ಕುರಿತು ದೇಶದಾದ್ಯಂತ ಕುತೂಹಲ ಮೂಡಿತ್ತು. ಸದ್ಯದ ಫಲಿತಾಂಶವು ತುಂಬ ನಿರ್ಣಾಯಕವಾಗಿದ್ದು, ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಸೂಕ್ತ ಸಮಯದಲ್ಲಿ ಇಂಥ ಫಲಿತಾಂಶ ಹೊರಬಿದ್ದಿದೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಇದೇ ವೇಳೆ, ‘ದೇಶದ ಎಲ್ಲೆಡೆ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಇದರಿಂದ ಅವರು ಪಾಠ ಕಲಿಯಬೇಕು’ ಎಂದು ಸಲಹೆ ನೀಡಿದ್ದಾರೆ.

ಈ ಬಾರಿಯ ಚುನಾವಣೆ ತನ್ನದೇ ಆದ ಮಹತ್ವ ಇತ್ತು. ‘2014ರ ಲೋಕಸಭೆ ಚುನಾವಣೆ ಸೋಲಿನಿಂದ ಕಾಂಗ್ರೆಸ್ ಪಾಠ ಕಲಿತಿಲ್ಲ’ ಎಂಬುದನ್ನು ಇದು ತೋರಿಸಿದೆ ಎಂದು ಟೀಕಿಸಿದ್ದಾರೆ.

‘ಜನರು ಈಗಲೂ ಕಾಂಗ್ರೆಸ್ ಸ್ವೀಕರಿಸಲು ಸಿದ್ಧರಾಗಿಲ್ಲ. ನಾವು ನೀಡಿದ ಕಾಂಗ್ರೆಸ್ ಮುಕ್ತ ಭಾರತ ಕರೆಯನ್ನು ಜನರು ಗಂಭೀರವಾಗಿ ತೆಗೆದುಕೊಂಡಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಅಭಿನಂದನೆ: ಈ ನಡುವೆ, ಬಿಜೆಪಿ ಜಯಭೇರಿಯ ಲಕ್ಷಣಗಳು ಗೋಚರಿಸಿದ ಬೆನ್ನಲ್ಲೆ, ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಸರ್ಬಾನಂದ ಸೊನವಾಲ್ ಅವರೊಟ್ಟಿಗೆ ದೂರವಾಣಿ ಮೂಲಕ ಮಾತನಾಡಿ, ಅಭಿನಂದನೆ ತಿಳಿಸಿದ್ದಾರೆ.

Comments are closed.