ರಾಷ್ಟ್ರೀಯ

ಐಎಸ್‌ಐಎಸ್ ನಿಂದಾಗಿ ಎಲ್‌ಇಟಿ, ಜೆಇಎಂ,ಐಎಂ ಮತ್ತು ಸಿಮಿಯಂತಹ ಉಗ್ರ ಸಂಘಟನೆಗಳ ಬಲ ಕುಗ್ಗುತ್ತಿದೆ

Pinterest LinkedIn Tumblr

isiನವದೆಹಲಿ, ಮೇ 18- ವಿಶ್ವದಾದ್ಯಂತ ಖಲೀಫೇಟ್ (ದೇವರಾಜ್ಯ) ಸ್ಥಾಪನೆಗೆ ಹೊರಟಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಸಂಘಟನೆ ಭಾರತದ ಮೂಲಭೂತವಾದಿ ಯುವಕರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿದ್ದು, ಅದರ ಈ ಕ್ಷಿಪ್ರ ಬೆಳವಣಿಗೆ ಲಷ್ಕರ್-ಎ-ತಯ್ಬಾ, ಜೈಷ್-ಎ-ಮೊಹಮ್ಮದ್‌ನಂತಹ ಉಗ್ರ ಸಂಘಟನೆಗಳಿಂದ ಬಹುತೇಕರು ವಿಮುಖರಾಗುತ್ತಿದ್ದಾರೆ.

ಐಎಸ್‌ಐಎಸ್ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಭಾರತದಲ್ಲಿನ ಯುವ ಮೂಲಭೂತವಾದಿಗಳು ಈಗ ಅದರತ್ತ ಹೆಚ್ಚಿನ ಒಲವು ತೋರುತ್ತಿರುವುದರಿಂದ ಎಲ್‌ಇಟಿ, ಜೆಇಎಂ, ಇಂಡಿಯನ್ ಮುಜಾಹಿದೀನ್ (ಐಎಂ) ಮತ್ತು ಸಿಮಿಯಂತಹ ಉಗ್ರ ಸಂಘಟನೆಗಳು ಜಿಹಾದಿ ದಾಳಿಗಳನ್ನು ನಡೆಸುವ ತಮ್ಮ ಸಾಮರ್ಥ್ಯ ತೋರಿಸುತ್ತಿರುವ ಹೊರತಾಗಿಯೂ, ಈ ಸಂಘಟನೆಗಳ ಬಲ ಕುಗ್ಗುವಂತಾಗಿದೆ.

ಐಎಸ್ ಉಗ್ರರು ಇತ್ತೀಚೆಗೆ ಸಿರಿಯಾ, ಇರಾಕ್, ಅಮೆರಿಕ, ರಷ್ಯ ಮತ್ತು ಸೌದಿ ಅರೇಬಿಯದಂತಹ ಮೈತ್ರಿ ಪಡೆಗಳೆದುರು ಹಿನ್ನಡೆ ಅನುಭವಿಸಿದ್ದರೂ, ಉಳಿದ ಉಗ್ರ ಸಂಘಟನೆಗಳಿಗಿಂತಲೂ ಅದೇ ಭಾರತೀಯ ಯುವ ಮೂಲಭೂತವಾದಿಗಳ ಆಯ್ಕೆಯಾಗಿದೆ. ಈ ಕುರಿತಂತೆ ಸಮಗ್ರ ವರದಿ ನೀಡಿರುವ ಭಾರತೀಯ ಗುಪ್ತಚರ ಇಲಾಖೆ, ಇತ್ತೀಚಿನವರೆಗೂ ಭಾರತದ ಮೂಲಭೂತವಾದಿಗಳಿಗೆ ಪ್ರಿಯವಾಗಿದ್ದ ಪಾಕಿಸ್ಥಾನ ಮೂಲದ ಎಲ್‌ಇಟಿ, ಜೆಇಎಂ, ಹೆಚ್‌ಎಂ, ಐಎಂ, ಸಿಮಿ ಸಂಘಟನೆಗಳಿಂದ ಭಾರತೀಯ ಮುಸ್ಲಿಂ ಮೂಲಭೂತವಾದಿಗಳು ವಿಮುಖವಾಗುತ್ತಿದ್ದು, ಇಸ್ಲಾಮಿಕ್ ಸ್ಟೇಟ್ ಸಂಘಟನೆಯನ್ನೇ ಪ್ರಮುಖ ಗಮ್ಯ ಸ್ಥಾನವಾಗಿಟ್ಟುಕೊಂಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದೆ.

Comments are closed.