ರಾಷ್ಟ್ರೀಯ

ನೀವು ದಿಲ್ಲಿಯಲ್ಲಿ ವಾಸವಿದ್ದರೆ ಪರೋಕ್ಷ ಧೂಮಪಾನಿಗಳು

Pinterest LinkedIn Tumblr

smokeಹೊಸದಿಲ್ಲಿ: ದಿಲ್ಲಿ ಮಹಾನಗರದಲ್ಲಿ ವಾಸಿಸುವ ನೀವು ಪರೋಕ್ಷವಾಗಿ ಧೂಮಪಾನಿಗಳೇ ಆಗಿ ಬಿಡುತ್ತೀರಿ ಎಂದು ಅಮೆರಿಕದ ಬ್ರಿಗಂ ಯಂಗ್ ಯುನಿವರ್ಸಿಟಿಯ ಪ್ರೊ. ಆರ್ಡೆನ್ ಪೋಪ್-3 ಹೇಳಿದ್ದಾರೆ.

ವಾಯು ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆ ಕುರಿತು ಸಂಶೋಧನೆ ನಡೆಸುತ್ತಿರುವ ಆರ್ಡೆನ್, ನಗರದಲ್ಲಿ ಕ್ಯೂಬಿಕ್ ಮೀಟರ್ ಪ್ರದೇಶದಲ್ಲಿ ಉಸಿರಾಟ ಸಮಸ್ಯೆಗೆ ಕಾರಣವಾಗುವ ಮಾಲಿನ್ಯ ಕಣ ಪ್ರಮಾಣ 100-150 ಮೈಕ್ರೊ ಗ್ರಾಂನಷ್ಟು ಇದೆ. ಮನೆಯೊಂದರಲ್ಲಿ ಪ್ರತಿದಿನ 10-15 ಪ್ಯಾಕ್ ಸಿಗರೇಟ್ ಸುಡಲಾಗುತ್ತಿದೆ. ದಿಲ್ಲಿಯ ಮಾಲಿನ್ಯ ಕಣ ಪ್ರಮಾಣ ಕ್ಯೂಬಿಕ್ ಮೀಟರ್‌ಗೆ 100 ಮೈಕ್ರೊ ಗ್ರಾಂಗೂ ಹೆಚ್ಚಿರುತ್ತದೆ ಎಂದು ವಿವರಿಸಿದ್ದಾರೆ.

ಉತ್ತರ ಭಾರತದಲ್ಲಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಭಾರತ- ಅಮೆರಿಕ ಕಾರ್ಯಾಗಾರದಲ್ಲಿ ಮಾತನಾಡಿದ ಆರ್ಡೆನ್, ಒಬ್ಬ ವ್ಯಕ್ತಿ ಮಾಡುವ ಧೂಮಪಾನವು ಧೂಮಪಾನ ಮಾಡದ 5-6 ಮಂದಿಯನ್ನು ಪರೋಕ್ಷ ಧೂಮಪಾನಿಗಳನ್ನಾಗಿಸುವ ಪರಿಸ್ಥಿತಿ ಇಲ್ಲಿದೆ. ಅಮೆರಿಕದಲ್ಲಿ ಪ್ರತಿ ಸಿಗರೇಟ್ ಪ್ಯಾಕ್ ಕ್ಯೂಬಿಕ್ ಮೀಟರ್ ಪ್ರದೇಶದಲ್ಲಿ 20 ಮೈಕ್ರೊಗ್ರಾಂನಷ್ಟು ಮಾಲಿನ್ಯ ಕಣಗಳನ್ನು ಉಂಟು ಮಾಡುತ್ತದೆ ಎಂದು ಹೇಳಿದರು.

ಧೂಮಪಾನದಿಂದ ಆಗುವ ಆರೋಗ್ಯ ಸಮಸ್ಯೆ ವಾಯು ಮಾಲಿನ್ಯಕ್ಕಿಂತ ಅಪಾಯಕಾರಿ. ನೀವು ಧೂಮಪಾನ ಮಾಡುವಾಗ ನಿಮ್ಮ ಶ್ವಾಸಕೋಶವು ಅತಿ ಮಾಲಿನ್ಯ ಪ್ರದೇಶದಲ್ಲಿ ನೀವು ವಾಸ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯ ಕಣಗಳಿಗೆ ತೆರೆದುಕೊಳ್ಳುತ್ತದೆ. ನೀವು ಅತಿ ಕಡಿಮೆ ಪ್ರಮಾಣದಲ್ಲಿ ಧೂಮಪಾನ ಮಾಡಿದರೂ ಇದೇ ಪ್ರಕ್ರಿಯೆ ನಡೆಯುತ್ತದೆ. ಧೂಮಪಾನದ ಪರಿಣಾಮ ಧೂಮಪಾನ ಮಾಡದ ಮಕ್ಕಳು ಮತ್ತು ವಯಸ್ಕರಲ್ಲೂ ಶ್ವಾಸಕೋಶ, ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ ಎಂದು ಅವರು ವಿವರಿಸಿದರು.

Comments are closed.