ರಾಷ್ಟ್ರೀಯ

ಮಧುಚಂದ್ರ ಮುಗಿಸಿ ಬಂದ ಮಹಿಳೆ ಏರ್‌ಪೋರ್ಟ್ ವಾಶ್‌ರೂಂನಲ್ಲಿ ನಾಪತ್ತೆ

Pinterest LinkedIn Tumblr

washಹೊಸದಿಲ್ಲಿ: ಮಧುಚಂದ್ರ ಮುಗಿಸಿ ಪತಿಯ ಜತೆ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮಹಿಳೆ ವಾಶ್‌ರೂಂಗೆ ತೆರಳಿದ್ದು ಬಳಿಕ ನಾಪತ್ತೆಯಾಗಿದ್ದಾರೆ.

ತವರು ಲಖನೌಗೆ ಪ್ರಯಾಣಿಸಲೆಂದು ಇಲ್ಲಿ ವಿಮಾನಕ್ಕಾಗಿ ದಂಪತಿ ಕಾಯುತ್ತಿದ್ದರು. ಮೊಬೈಲ್ ಮತ್ತು ಪರ್ಸ್ ಗಂಡನ ಕೈಗೆ ನೀಡಿ ಮಹಿಳೆ ವಾಶ್‌ರೂಂಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು.

ನೀಲಿ ಸೀರೆಯುಟ್ಟಿದ್ದ ಅನಿಶಾ ಸಂಜೆ 6.14ಕ್ಕೆ ವಾಶ್‌ರೂಂ ಪ್ರವೇಶಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಮೂರು ನಿಮಿಷದ ಬಳಿಕ ಬುರ್ಖಾ ಧರಿಸಿದ್ದ ಮಹಿಳೆ ಅಲ್ಲಿಂದ ಹೊರ ಬಂದಿರುವುದು ಕೂಡ ದಾಖಲಾಗಿದೆ. ಆ ಮಹಿಳೆ ವಿಐಪಿ ಪಾರ್ಕಿಂಗ್ನತ್ತ ಹೋಗಿ ವ್ಯಕ್ತಿಯೊಬ್ಬನ ಜತೆ ಮಾತನಾಡುತ್ತಿರುವುದು ಕಂಡು ಬಂದಿದೆ.

ಪತಿ ಸರ್ವೇಶ್ ಪತ್ನಿ ಕಾಣೆಯಾಗಿರುವುದಾಗಿ ದೂರು ನೀಡಿದ್ದು, ಬುರ್ಖಾ ಧರಿಸಿದ್ದ ಮಹಿಳೆಯ ನಡಿಗೆ ಅನೀಶಾ ಅವರನ್ನು ಹೋಲುತ್ತಿದೆ ಎಂದು ಕೇಂದ್ರ ಕೈಗಾರಿಕಾ ಭದ್ರತಾಪಡೆ ಪೊಲೀಸರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ತನಗೆ ನಂಬಿಕೆ ಇಲ್ಲ ಎಂದು ಸರ್ವೇಶ್ ಹೇಳಿದ್ದಾರೆ. ಬುರ್ಖಾ ಮಹಿಳೆ ಮತ್ತು ಆಕೆ ಭೇಟಿಯಾದ ವ್ಯಕ್ತಿ ಮೂರನೇ ನಂಬರ್ ಲೇನ್‌ನತ್ತ ಹೊಗಿದ್ದು, ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪತ್ನಿ ಅರ್ಧ ಗಂಟೆಯಾದರೂ ಬರದಿದ್ದಾಗ ಮಹಿಳೆಯೊಬ್ಬರಿಗೆ ಪೋಟೊ ತೋರಿಸಿದ ಸರ್ವೇಶ್ ವಾಶ್‌ರೂಂನಲ್ಲಿ ಇದ್ದಾರೆಯೇ ಎಂದು ನೋಡುವಂತೆ ಮನವಿ ಮಾಡಿದ್ದರು. ಆಕೆ ನೋಡಿ ಬಂದು ಇಲ್ಲ ಎಂದು ತಿಳಿಸಿದ್ದಾರೆ. ಆದರೆ ಈ ಕುರಿತು ಸರ್ವೇಶ್ ಅಧಿಕೃತವಾಗಿ ಇನ್ನೂ ದೂರು ದಾಖಲಿಸಿಲ್ಲ.

Comments are closed.