ಮನೋರಂಜನೆ

ಸರ್ಕಾರದ ಆಸ್ತಿಗಳಿಗೆ ‘ಗಾಂಧಿ’ ಎಂದು ಹೆಸರಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಿಷಿ ಕಪೂರ್ !

Pinterest LinkedIn Tumblr

rishi111

ಮುಂಬೈ: ಕಾಂಗ್ರೆಸ್ ಪಕ್ಷವು ‘ಗಾಂಧಿ’ ಎಂದು ಹೆಸರಿಟ್ಟ ಸರ್ಕಾರದ ಆಸ್ತಿಗಳ ಹೆಸರಗಳನ್ನೆಲ್ಲ ಬದಲಿಸಿ. ಬಾಂದ್ರಾ/ ವರ್ಲಿ ಸೀ ಲಿಂಕ್ ನ್ನು ಲತಾ ಮಂಗೇಶ್ಕರ್ ಅಥವಾ ಜೆಆರ್‌ಡಿ ಟಾಟಾ ಲಿಂಕ್ ರೋಡ್ ಎಂದು ಬದಲಿಸಿ. ಇದೇನು ಅಪ್ಪನ ಸೊತ್ತು ಎಂದು ಅಂದುಕೊಂಡಿದ್ದಾರಾ? ಎಂದು ಬಾಲಿವುಡ್‌ನ ಹಿರಿಯ ನಟರಿಷಿ ಕಪೂರ್ ಟ್ವೀಟ್ ಮಾಡಿದ್ದಾರೆ.

ಗಾಂಧಿ ಕುಟುಂಬದ ವಿರೋಧವಾಗಿಯೇ ವಿಶೇಷವಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡಿದ ರಿಷಿ ಕಪೂರ್, ದೆಹಲಿಯಲ್ಲಿರುವ ರಸ್ತೆಗಳ ಹೆಸರನ್ನು ಬದಲಿಸುವುದಾದರೆ ಕಾಂಗ್ರೆಸ್‌ನ ಆಸ್ತಿಗಳ ಹೆಸರನ್ನು ಯಾಕೆ ಬದಲಿಸಬಾರದು? ಚಂಡೀಗಢದಲ್ಲಿಯೂ ರಾಜೀವ್ ಗಾಂಧಿಯವರ ಸ್ವತ್ತು ಇದೆಯೇ? ಯೋಚಿಸಿ? ಯಾಕೆ?

ನಮ್ಮ ದೇಶದ ಪ್ರಧಾನ ಸ್ವತ್ತುಗಳಿಗೆ ಹೆಸರಿಡುವಾಗ ಸಮಾಜಕ್ಕೆ ಕೊಡುಗೆ ನೀಡಿದವರ ಹೆಸರಿಡಬೇಕು. ಎಲ್ಲದಕ್ಕೂ ಗಾಂಧಿ ಹೆಸರು? ನಾನಿದನ್ನು ಒಪ್ಪುವುದಿಲ್ಲ. ಈ ಬಗ್ಗೆ ಜನರೇ ಯೋಚಿಸಿ ಎಂದು ರಿಷಿ ಕಪೂರ್ ಸೋಮವಾರ ಟ್ವೀಟ್ ಮಾಡಿದ್ದರು.

ದೆಹಲಿ ವಿಮಾನ ನಿಲ್ದಾಣದ ಹೆಸರಿನ ಬಗ್ಗೆಯೂ ಅಸಮಾಧಾನ ವ್ಯಕ್ತ ಪಡಿಸಿದ ಕಪೂರ್, ಯಾಕೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ? ಅದಕ್ಕೆ ಮಹಾತ್ಮಾ ಗಾಂಧಿ ಅಥವಾ ಭಗತ್ ಸಿಂಗ್, ಅಂಬೇಡ್ಕರ್ ಅಥವಾ ನನ್ನದೇ ಹೆಸರು ರಿಷಿ ಕಪೂರ್ ಅಂಥ ಇಡುವುದಕ್ಕೇನಿತ್ತು? ಏನಂತೀರಾ? ಎಂದು ಇನ್ನೊಂದು ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.

ಅದೇ ವೇಳೆ ಫಿಲ್ಮ್ ಸಿಟಿಗೆ ಮರುನಾಮಕರಣ ಮಾಡುವುದರ ಬಗ್ಗೆಯೂ ಕಪೂರ್ ಟ್ವೀಟ್ ಮಾಡಿದ್ದಾರೆ.

ಫಿಲ್ಮ್ ಸಿಟಿಗೆ ದಿಲೀಪ್ ಕುಮಾರ್, ದೇವ್ ಆನಂದ್, ಅಶೋಕ್ ಕುಮಾರ್ ಅಥವಾ ಅಮಿತಾಬ್ ಬಚ್ಚನ್ ನ ಹೆಸರಿಡಬೇಕು. ರಾಜೀವ್ ಗಾಂಧಿ ಉದ್ಯೋಗ್ ಅಂದ್ರೆ ಏನು? ಸ್ನೇಹಿತರೇ ಯೋಚಿಸಿ!

ಮೊಹಮ್ಮದ್ ರಫಿ, ಮುಖೇಶ್, ಮನ್ನಾಡೇ, ಕಿಶೋರ್ ಕುಮಾರ್ ಮೊದಲಾದವರ ಹೆಸರುಗಳನ್ನು ನಮ್ಮ ದೇಶದಲ್ಲಿನ ಸ್ಥಳಗಳಿಗಿಡುವುದರ ಬಗ್ಗೆ ಊಹಿಸಿಕೊಳ್ಳಿ, ಇದೊಂದು ಸಲಹೆ.

ರಾಜ್ ಕಪೂರ್ ತನ್ನ ಮರಣಾನಂತರವೂ ಭಾರತ ಹೆಮ್ಮೆ ಪಡುವಂತೆ ಮಾಡಿದವರು, ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಹೆಚ್ಚಿನದನ್ನು ಅವರು ಗಳಿಸಿದ್ದಾರೆ ಎಂದು ಕಪೂರ್ ಟ್ವೀಟ್ ಮಾಡಿದ್ದಾರೆ.

ಆದಾಗ್ಯೂ, ಗಾಂಧಿ ಕುಟುಂಬದ ವಿರುದ್ಧ ರಿಷಿ ಕಪೂರ್ ಇಷ್ಟೊಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವುದು ಎಲ್ಲರನ್ನೂ ಅಚ್ಚರಿ ಪಡಿಸಿದೆ.

Comments are closed.