ಮನೋರಂಜನೆ

ಕಾನ್ ಚಿತ್ರೋತ್ಸವದಲ್ಲಿ ಪ್ರೇಕ್ಷಕರ ಮನಸೂರೆಗೊಂಡ ನವಾಜುದ್ದೀನ್ ಸಿದ್ದಿಕಿ ನಟನೆಯ ‘ರಾಮನ್ ರಾಘವ 2.0’

Pinterest LinkedIn Tumblr

raman ragava

ಕಾನ್: ಮುಂಬೈನ ನ ಸರಣಿ ಕೊಲೆಗಾರ ರಾಮನ್ ರಾಘವ ಜೀವನಾಧಾರಿತ ಚಿತ್ರ ‘ರಾಮನ್ ರಾಘವ ೨.೦’ ೬೯ನೇ ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ನಟ ನವಾಜುದ್ದೀನ್ ಸಿದ್ದಿಕಿ ಅವರ ನಟನೆ ಪ್ರೇಕ್ಷಕರ ಮನಸೂರೆಗೊಂಡಿದ್ದು, ಕರತಾಡನ ಪ್ರದರ್ಶಿಸಿ ನಟನನ್ನು ಅಭಿನಂದಿಸಿದ್ದಾರೆ.

‘ಗ್ಯಾಂಗ್ಸ್ ಆಫ್ ವಸೀಪುರ್’ ಖ್ಯಾತಿಯ ಅನುರಾಗ್ ಕಶ್ಯಪ್ ಈ ಸಿನೆಮಾವನ್ನು ನಿರ್ದೇಶಿಸಿದ್ದು, ಸರಣಿ ಕೊಲೆಗಾರನ ಪಾತ್ರದಲ್ಲಿ ನವಾಜುದ್ದೀನ್ ಕಾಣಿಸಿಕೊಂಡಿದ್ದರೆ, ವಿಕ್ಕಿ ಕೌಶಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರದರ್ಶನಕ್ಕೂ ಮುಂಚಿತವಾಗಿ ಟ್ವೀಟ್ ಮಾಡಿದ್ದ ನಿರ್ದೇಶಕ ಅನುರಾಗ್ ಕಶ್ಯಪ್ “ಮೊದಲ ಪ್ರದರ್ಶನ ಶುರುವಾಗುವುದಿದೆ. ಚಿತ್ರಮಂದಿರ ಸಂಪೂರ್ಣ ತುಂಬಿದೆ” ಎಂದಿದ್ದರು.

ಕಾನ್ ಚಿತ್ರೋತ್ಸವದ ಸಿನೆಮಾಗಳ ವಿಮರ್ಶೆಗಳ ಅಂತರ್ಜಾಲ ತಾಣವಾದ ವೆರೈಟಿ.ಕಾಂ ನಲ್ಲಿ “ಕಶ್ಯಪ್ ಅವರ ನಿರ್ದೇಶನ ರೋಮಾಂಚನ ಮೂಡಿಸುವುದನ್ನು ಮುಂದುವರೆಸಿದೆ” ಎಂದು ರಾಮನ್ ರಾಘವ ೨.೦’ ಬಗ್ಗೆ ಪ್ರಶಂಸಿಸಿದ್ದಾರೆ.

Comments are closed.