
ನವದೆಹಲಿ: ಗಡಿಯಲ್ಲಿ ಅತಿಕ್ರಮ ಪ್ರವೇಶ ಮಾಡಿದ ಬಾಂಗ್ಲಾದೇಶಿ ತಂಡವನ್ನು ಚಿನ್ನದ ಕಳ್ಳಸಾಗಾಣಿಕೆದಾರರು ಎಂದು ಬಗೆದ ಪಶ್ಚಿಮ ಬಂಗಾಳದ ಇಂಡೋ-ಬಾಂಗ್ಲಾ ಗಡಿ ಕಾವಲು ಕರ್ತವ್ಯದಲ್ಲಿ ನಿಯೋಜಿತರಾಗಿದ್ದ ಸಿಬ್ಬಂದಿ ಹತ್ಯೆಗೈದಿದ್ದು, ಈ ಸಂಬಂಧ ೭ ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ವಿಚಾರಣೆಗೆ ಆದೇಶಿಸಲಾಗಿದೆ.
ಮೇ.೧೪ರಂದು ಬೆಳಗ್ಗೆ ೧೦ ಗಂಟೆ ಸುಮಾರಿಗೆ ಪಶ್ಚಿಮ ಬಂಗಾಳದ ಕೃಷ್ಣಾನಗರ್ ಜಿಲ್ಲೆಯ ಬನ್ಪುರ್ ಗಡಿ ಭಾಗದಲ್ಲಿ ಶಂಕಿತ ಕಳ್ಳಸಾಗಾಣಿಕೆದಾರರು ಕಾಣಿಸಿಕೊಂಡಿದ್ದಾರೆ. ಕೂಡಲೇ ಸಿಬ್ಬಂದಿಗಳು ಅವರ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದರು.
ತದನಂತರ ಅವರು ಕಳ್ಳಸಾಗಾಣಿಕೆದಾರರ ಗುಂಪಲ್ಲ. ಅದು ಯುವಕರ ಗುಂಪು ಎಂದು ತಿಳಿದು ಬಂದಿದ್ದು, ಪ್ರಕರಣ ಸಂಬಂಧ ಹಿರಿಯ ಅಧಿಕಾರಿ ಸೇರಿದಂತೆ ೭ ಮಂದಿಯನ್ನು ಅಮಾನತುಗೊಳಿಸಲಾಗಿದ್ದು, ವಿಚಾರಣೆಯನ್ನು ನಡೆಸಲಾಗುತ್ತಿದೆ. ಸ್ಥಳ ಪರಿಶೀಲನೆ ನಡೆಸಿದ ಹಿರಿಯ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕಿದೆ.