ರಾಷ್ಟ್ರೀಯ

ಟ್ರೇನ್ ಮುಂದೆ ಜಿಗಿದರೂ ಸಾಯದ ಮಹಾತಾಯಿ!

Pinterest LinkedIn Tumblr

trian

ನವದೆಹಲಿ: ಮಹಿಳೆಯೊಬ್ಬಳು ತನ್ನ ಎರಡು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಆಗಮಿಸುತ್ತಿದ್ದ ರೈಲಿನ ಮುಂದೆ ಜಿಗಿದಿದ್ದಾಳೆ. ಆದರೆ ಪವಾಡ ಸದೃಶ್ಯ ಎಂಬಂತೆ ಮಹಿಳೆ ಹಾಗೂ ಮಕ್ಕಳು ಸಾವಿನಿಂದ ಪಾರಾಗಿದ್ದಾರೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಚಿತ್ರೀಕರಣಗೊಂಡಿದ್ದು, ಇದೀಗ ಅಂತರ್ಜಾದಲ್ಲಿ ವ್ಯಾಪಕ ಸದ್ದು ಮಾಡುತ್ತಿದೆ.

ಸಿನಿಮಾ ರೀತಿಯಲ್ಲಿ ಉಕ್ರೇನ್ನ ರ್ಖಾವ್ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಹಾಗೂ ಮಕ್ಕಳು ಸಾವಿನಿಂದ ಗೆದ್ದುಬಂದಿದ್ದಾರೆ. ರೈಲ್ವೆ ಪ್ಲಾಟ್ಫಾರ್ಮ್ ತುದಿಗೆ ಐದು ಹಾಗೂ ಹನ್ನೆರಡು ವರ್ಷದ ಮಕ್ಕಳೊಂದಿಗೆ ನಿಂತಿದ್ದ ಮಹಿಳೆ ರೈಲು ಆಗಮಿಸುತ್ತಿದ್ದಂತೆ ಒಮ್ಮೆಗೇ ಜಿಗಿದಿದ್ದಾಳೆ. ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಮಹಿಳೆ ಹಾಗೂ ಮಕ್ಕಳು ರೈಲಿಗೆ ಬಲಿಯಾದರು ಎಂದುಕೊಂಡಿದ್ದರು. ಆದರೆ ಸಣ್ಣಪುಟ್ಟ ಗಾಯದೊಂದಿಗೆ ಸಾವಿನಿಂದ ಪಾರಾದ ಮೂವರೂ ಮರುಜೀವ ಪಡೆದಿದ್ದಾರೆ. ಮಹಿಳೆ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದಳು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ.

Write A Comment