ಮನೋರಂಜನೆ

ಒಂದೇ ಐಪಿಎಲ್ ಆವೃತ್ತಿಯಲ್ಲಿ 3 ಶತಕ ಸಿಡಿಸಿ ವಿಶ್ವದಾಖಲೆಗೈದ ವಿರಾಟ್ ಕೊಹ್ಲಿ

Pinterest LinkedIn Tumblr

virat

ಐಪಿಎಲ್ ಪಂದ್ಯಾವಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಐಪಿಎಲ್ ಆವೃತ್ತಿಯಲ್ಲಿ ಮೂರು ಶತಕ ಸಿಡಿಸಿದ ಸಾಧನೆಗೆ ರಾಯಲ್ ಚಾಲೆಂಡರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗುಜರಾತ್ ಲಯನ್ಸ್ ಬೌಲರ್ ಗಳಿಗೆ ಬೆವರಿಳಿಸಿದರು. 55 ಎಸೆತಗಳಲ್ಲಿ ಭರ್ಜರಿ 8 ಸಿಕ್ಸರ್ ಗಳೊಂದಿಗೆ 109 ರನ್ ಗಳಿಸಿ ಮೂರನೇ ಶತಕ ದಾಖಲಿಸಿದರು.

ಏಪ್ರಿಲ್ 24 ರಂದು ರಾಜ್ ಕೋಟ್ ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಐಪಿಎಲ್ ನ ಚೊಚ್ಚಲ ಶತಕ(100*) ಬಾರಿಸಿದ್ದರು. ಇದಾದ ಬಳಿಕ ಮೇ 7 ರಂದು ಪುಣೆ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಅಜೇಯ 108 ರನ್ ಗಳಿಸಿ ಎರಡನೇ ಶತಕ ಸಿಡಿಸಿದರು.

ಇನ್ನು ಆರ್ಸಿಬಿ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಅವರ ಎರಡು ಶತಕ ಸಿಡಿಸಿದ್ದರು.

Write A Comment