ಮನೋರಂಜನೆ

ಡಿವಿಲಿಯರ್ಸ್, ಕೊಹ್ಲಿ ಸಿಡಿಲಬ್ಬರದ ಶತಕ, ಗುಜರಾತ್​ಗೆ 249 ರನ್ ಗುರಿ

Pinterest LinkedIn Tumblr

ab-de-villiers-virat-kohli

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಲಯನ್ಸ್ ತಂಡದ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 248 ರನ್‌ಗಳನ್ನು ದಾಖಲಿಸಿದೆ.

abbbleaad

ಟಾಸ್ ಗೆದ್ದ ಗುಜರಾತ್ ಲಯನ್ಸ್ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತ್ತು. ಆರ್‌ಸಿಬಿ ತಂಡ ಆರಂಭಿಕ ದಾಂಡಿಗನಾಗಿ ಕ್ರೀಸ್ ಗಿಳಿದ ಕ್ರಿಸ್ ಗೇಲ್ 4 ನೇ ಓವರ್‌ನಲ್ಲಿ ಕುಲಕರ್ಣಿ ಬಾಲ್‌ಗೆ ಔಟಾದರು. ಫಾರ್ಮ್ ಕಳೆದುಕೊಂಡಿರುವ ಗೇಲ್ ಈ ಪಂದ್ಯದಲ್ಲಿ ಒಂದು ಬೌಡರಿ ಬಾರಿಸಿ ಗಳಿಸಿದ್ದು ಕೇವಲ 6 ರನ್! ಆರಂಭದಲ್ಲೇ ಗೇಲ್ ವಿಕೆಟ್ ಕಳೆದುಕೊಂಡರೂ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅದ್ಭುತ ಪ್ರದರ್ಶನ ಮತ್ತು ಹೊಡೆಬಡಿ ಜುಗಲ್‌ಬಂಧಿಯಿಂದ ಆರ್‌ಸಿಬಿ ಬೃಹತ್ ಮೊತ್ತವನ್ನು ಪೇರಿಸುವಂತಾಯಿತು.

ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಕೊಹ್ಲಿ ಕೊನೆಯ ಓವರ್ ಮುಗಿಯಲು ಇನ್ನೇನು ಒಂದೇ ಒಂದು ಬಾಲ್ ಬಾಕಿಯಿರುವಾಗ ಕುಮಾರ್ ಬಾಲ್‌ಗೆ ಬ್ರಾವೋ ಕೈಗೆ ಕ್ಯಾಚಿತ್ತು ಪೆವಿಲಿಯನ್‌ಗೆ ಮರಳಿದರು. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಕೊಹ್ಲಿ 55 ಬಾಲ್‌ಗಳಲ್ಲಿ 109 ರನ್ ಗಳಿಸಿದ್ದಾರೆ. ಇದರಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್‌ಗಳು ಸೇರಿವೆ.

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಎಬಿ ಡಿವಿಲಿಯರ್ಸ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ್ದಾರೆ. 52 ಬಾಲ್‌ಗಳಲ್ಲಿ 10 ಬೌಂಡರಿ, 12 ಸಿಕ್ಸರ್ ಗಳನ್ನು ಸಿಡಿಸಿದ ಡಿವಿಲಿಯರ್ಸ್ ಅಜೇಯ 129 ರನ್ ದಾಖಲಿಸುವ ಮೂಲಕ ಅತೀ ಹೆಚ್ಚು ರನ್ ಗಳಿಸಿದ್ದಾರೆ. ಕೊಹ್ಲಿಯ ನಂತರ ಕ್ರೀಸ್ ಗಿಳಿದ ಎಸ್ ಆರ್ ವಾಟ್ಸನ್ (0) ಪ್ರಸ್ತುತ ಇನ್ನಿಂಗ್ಸ್‌ನ ಕೊನೆಯ ಓವರ್‌ನ ಕೊನೆಯ ಬಾಲ್‌ನಲ್ಲಿ ಕಾರ್ತಿಕ್‌ಗೆ ಕ್ಯಾಚಿತ್ತು ಔಟಾದರು.

ಗುಜರಾತ್ ಲಯನ್ಸ್ ಪರವಾಗಿ ಪಿ ಕುಮಾರ್ ಎರಡು ವಿಕೆಟ್ ಮತ್ತು ಡಿಎಸ್ ಕುಲಕರ್ಣಿ ಒಂದು ವಿಕೆಟ್ ಪಡೆದಿದ್ದಾರೆ.

Write A Comment