ರಾಷ್ಟ್ರೀಯ

ಸಂಸದ ಪ್ರವೀಣ್ ರಾಷ್ಟ್ರಪಾಲ್ ನಿಧನ: ಕಲಾಪ ಮುಂದೂಡಿಕೆ

Pinterest LinkedIn Tumblr

1gy38jyeನವದೆಹಲಿ(ಪಿಟಿಐ): ಕಾಂಗ್ರೆಸ್‌ನ ರಾಜ್ಯಸಭೆ ಸಂಸದ ಪ್ರವೀಣ್ ರಾಷ್ಟ್ರಪಾಲ್(76) ಅವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರವೀಣ್‌ ಅವರ ನಿಧನಕ್ಕೆ ರಾಜ್ಯಸಭೆಯಲ್ಲಿ ಸಂತಾಪ ಸಲ್ಲಿಸಿ, ಕಲಾಪವನ್ನು ದಿನದಮಟ್ಟಿಗೆ ಮುಂದೂಡಲಾಯಿತು.

ಶುಕ್ರವಾರ ಕಲಾಪವನ್ನು ಮುಂದುವರಿಸುವ ಮೂಲಕ ಪ್ರಸ್ತುತ ನಡೆದ ಬಜೆಟ್ ಕಲಾಪದ ಎರಡನೇ ಅವಧಿಯನ್ನು ಮುಕ್ತಾಯಗೊಳಿಸಲಾಗುವುದು.

ಗುಜರಾತ್‌ನ ಸಂಸದರಾಗಿದ್ದ ಪ್ರವೀಣ್ ರಾಷ್ಟ್ರಪಾಲ್ ಅವರಿಗೆ ಮೂವರು ಪುತ್ರಿಯರು, ಪುತ್ರ ಇದ್ದಾರೆ. ಪತ್ನಿ ಕೆಲ ವರ್ಷಗಳ ಹಿಂದಷ್ಟೆ ನಿಧನರಾಗಿದ್ದಾರೆ.

ರಾಷ್ಟ್ರಪಾಲ್‌ ಅವರು 13ನೇ ಲೋಕಸಭಾ ಚುನಾವಣೆಯಲ್ಲಿ (1999–2004) ಸಂಸದರಾಗಿ ಚುನಾಯಿತರಾಗಿದ್ದರು. 2006ರ ಏಪ್ರಿಲ್ ನಿಂದ 2012ರ ಏಪ್ರಿಲ್ ವರೆಗೆ ಮೇಲ್ಮನೆ ಸದಸ್ಯರಾಗಿದ್ದರು. 2012ರಲ್ಲಿ ಸಂಸದರಾಗಿ ಪುನರ್‌ ಆಯ್ಕೆಯಾಗಿದ್ದರು.

Write A Comment