ರಾಷ್ಟ್ರೀಯ

ಆರ್‌ಬಿಐ ಗವರ್ನರ್ ರಘುರಾಮ್ ರಾಜನ್‌ರನ್ನು ಶಿಕಾಗೋಗೆ ಕಳುಹಿಸಬೇಕು: ಸುಬ್ರಮಣಿಯನ್ ಸ್ವಾಮಿ

Pinterest LinkedIn Tumblr

33

ನವದೆಹಲಿ: ’ನಿರುದ್ಯೋಗ ಮತ್ತು ಕೈಗಾರಿಕಾ ಚಟುವಟಿಕೆ ಕುಸಿತಕ್ಕೆ’ ಹೊಣೆಗಾರರಾದ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರನ್ನು ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ಬಿಜೆಪಿ ಸುಬ್ರಮಣಿಯನ್ ಸ್ವಾಮಿ ಗುರುವಾರ ಇಲ್ಲಿ ಸಲಹೆ ಮಾಡಿದ್ದಾರೆ.

‘ನನ್ನ ದೃಷ್ಟಿಯಲ್ಲಿ ಆರ್ಬಿಐ ಗವರ್ನರ್ ಅವರು ರಾಷ್ಟ್ರಕ್ಕೆ ಸೂಕ್ತರಾದ ವ್ಯಕ್ತಿ ಅಲ್ಲ. ನಾನು ಅವರ ಬಗ್ಗೆ ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ. ಹಣದುಬ್ಬರವನ್ನು ನಿಯಂತ್ರಿಸುವ ನೆಪದಲ್ಲಿ ಬಡ್ಡಿ ದರಗಳನ್ನು ಏರಿಸುವ ಮೂಲಕ ಅವರು ರಾಷ್ಟ್ರಕ್ಕೆ ಹಾನಿ ಉಂಟು ಮಾಡಿದ್ದಾರೆ’ ಎಂದು ಸ್ವಾಮಿ ಸಂಸತ್ ಭವನದಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಗವರ್ನರ್ ಅವರ ಕ್ರಮಗಳು ಕೈಗಾರಿಕೆಯ ಪತನ ಮತ್ತು ನಿರುದ್ಯೋಗ ಹೆಚ್ಚಲು ಕಾರಣವಾಗಿವೆ. ಎಷ್ಟು ಬೇಗ ಅವರನ್ನು ಚಿಕಾಗೋಗೆ ಕಳುಹಿಸಲು ಸಾಧ್ಯವೋ ಅಷ್ಟು ಒಳ್ಳೆಯದು ಎಂದು ಸ್ವಾಮಿ ನುಡಿದರು. ರಾಜನ್ ಅವರು ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಸಿನೆಸ್ನ ರಜಾದಲ್ಲಿರುವ ಪ್ರಾಧ್ಯಾಪಕರಾಗಿದ್ದಾರೆ. 2013ರ ಸೆಪ್ಟೆಂಬರ್ನಲ್ಲಿ ಆರ್ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜನ್ ಅವರು ಅಲ್ಪಾವಧಿ ಸಾಲಗಳ ದರವನ್ನು ಶೇಕಡಾ 7.25ರಿಂದ ಶೇಕಡಾ 8ಕ್ಕೆ ಏರಿಸುವ ಮೂಲಕ 2014ರ ಸಾಲಿನಲ್ಲಿ ಅತ್ಯಂತ ಹೆಚ್ಚಿನ ದರಗಳನ್ನು ಉಳಿಸಿದರು. ಬೆಳವಣಿಗೆಗೆ ಒತ್ತು ನೀಡುವ ಸಲುವಾಗಿ ದರಗಳ ವಿಚಾರದಲ್ಲಿ ಮೆದು ನೀತಿ ಅನುಸರಿಸಲು ವಿತ್ತ ಸಚಿವಾಲಯ ಮತ್ತು ಕೈಗಾರಿಕಾ ಕ್ಷೇತ್ರದಿಂದ ಒತ್ತಡ ಇದ್ದರೂ ಹಣದುಬ್ಬರದತ್ತ ಬೊಟ್ಟು ಮಾಡುತ್ತಾ ಅವರು ಬಡ್ಡಿ ದರಗಳನ್ನು ಇಳಿಸದೆ ಹಾಗೆಯೇ ಮುಂದುವರೆಸಿದರು ಎಂದು ಸ್ವಾಮಿ ಹೇಳಿದರು.

Write A Comment