ಮನೋರಂಜನೆ

ವಿರಾಟ್ ಕೊಹ್ಲಿಯನ್ನು ಸಚಿನ್ ಗೆ ಹೋಲಿಸ ಬೇಡಿ: ಸೆಹ್ವಾಗ್

Pinterest LinkedIn Tumblr

sachin-kohli

ಮುಂಬಯಿ: ಭಾರತ್ ಕ್ರಿಕೆಟ್ ದಂತಕತೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೊತೆಗೆ ವಿರಾಟ್ ಕೊಹ್ಲಿ ಅವರನ್ನು ಹೋಲಿಸುವುದು ಸರಿ ಕಾಣದು ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.

ಇಬ್ಬರು ಆಟಗಾರರನ್ನು ಪರಸ್ಪರ ಹೋಲಿಕೆ ಮಾಡಲೇಬಾರದು. ಜನ ನನ್ನನ್ನು ಸಚಿನ್‌ ತೆಂಡೂಲ್ಕರ್‌ ಜತೆ, ವಿವಿಯನ್‌ ರಿಚರ್ಡ್ಸ್ ಅವರೊಂದಿಗೆ ಹೋಲಿಕೆ ಮಾಡುತ್ತಿದ್ದರು. ಅದು ಸರಿಯಲ್ಲ. ಆಟಗಾರರು ಬೇರೆ ಬೇರೆ ಕಾಲಘಟ್ಟದಲ್ಲಿ ಆಡುತ್ತಾರೆ. ನನ್ನ ಪ್ರಕಾರ ಕೊಹ್ಲಿ ಅವರನ್ನು ಸಚಿನ್‌ ಅವರಿಗೆ ಹೋಲಿಕೆ ಮಾಡಿವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕ್ರಿಕೆಟ್‌ ಜಗತ್ತಿನಲ್ಲಿ ಎಬಿ ಡಿ’ವಿಲಿಯರ್ಸ್‌, ಡೇವಿಡ್‌ ವಾರ್ನರ್‌ರಂತಹ ಹಲವಾರು ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೆ ಸದ್ಯದ ಮಟ್ಟಿಗೆ ವಿರಾಟ್‌ ಕೊಹ್ಲಿ ಆಡುತ್ತಿರುವುದನ್ನು, ರನ್‌ ಗಳಿಸುತ್ತಿರುವುದನ್ನು ನೋಡಿದರೆ ಅವರು ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ ಎಂದು ಸೆಹ್ವಾಗ್‌ ತಿಳಿಸಿದ್ದಾರೆ.

ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ 2016ರಲ್ಲಿ ಅತ್ಯಮೋಘ ಫಾರ್ಮ್‌ನಲ್ಲಿದ್ದು, ಐಸಿಸಿ ಟಿ20 ವಿಶ್ವಕಪ್‌ ಹಾಗೂ ಐಪಿಎಲ್‌ನಲ್ಲಿ ರನ್‌ ಹೊಳೆ ಹರಿಸುತ್ತಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಕೊಹ್ಲಿ, ಐಪಿಎಲ್‌ನಲ್ಲಿ ಈಗಾಗಲೇ ಎರಡು ಶತಕಗಳ ಸಹಿತ ಗರಿಷ್ಠ ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Write A Comment