ರಾಷ್ಟ್ರೀಯ

ಉಜ್ಜಯಿನಿ ಕುಂಭಮೇಳದಲ್ಲಿ ದಲಿತ ಸಾಧುಗಳೊಂದಿಗೆ ಅಮಿತ್ ಶಾ ಪವಿತ್ರ ಸ್ನಾನ

Pinterest LinkedIn Tumblr

amith-11ಉಜ್ಜಯಿನಿ: ಉಜ್ಜಯಿನಿಯಲ್ಲಿ ನಡೆಯುತ್ತಿರುವ ಸಿಂಹಸ್ತ ಕುಂಭಮೇಳದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದಲಿತ ಸಾಧು ಹಾಗೂ ಇತರರೊಂದಿಗೆ ಪವಿತ್ರ ಸ್ನಾನ ಮಾಡಿದರು.
ಅಮಿತ್ ಶಾ ಅವರು ಸುಮಾರು ಒಂದು ತಿಂಗಳ ಕಾಲ ನಡೆಯುವ ಸಿಂಹಸ್ತ ಕುಂಭ ಮೇಳದಲ್ಲಿ ಭಾಗವಹಿಸಲು ಇಂದು ಇಂದೋರ್ ನಿಂದ ಉಜ್ಜಯಿನಿಗೆ ಆಗಮಿಸಿದ ಶಾ, ಶಿಪ್ರ ನದಿಯ ವಾಲ್ಮಿಕಿ ಘಾಟ್ ನಲ್ಲಿ ದಲಿತ ಸಾಧುಗಳೊಂದಿಗೆ ಪವಿತ್ರ ಸ್ನಾನ ಮಾಡಿದರು,
ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಗಮನದಲ್ಲಿಟ್ಟುಕೊಂಡು ದಲಿತರಿಗಾಗಿ ಆರ್ಎಸ್ಎಸ್ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸಂದರ್ಭದಲ್ಲೇ ಬಿಜೆಪಿ ಅಧ್ಯಕ್ಷರು ದಲಿತ ಸಾಧುಗಳೊಂದಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಅಮಿತ್ ಶಾ ಅವರೊಂದಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಹಾಗೂ ಇತರೆ ಬಿಜೆಪಿ ನಾಯಕರು ಪವಿತ್ರ ಸ್ನಾನ ಮಾಡಿದರು.

Write A Comment