ರಾಷ್ಟ್ರೀಯ

ಬಚಾವಾದ ವಿಜಯ್ ಮಲ್ಯ ! ಗಡಿಪಾರು ಮಾಡಲು ಬ್ರಿಟನ್ ನಕಾರ

Pinterest LinkedIn Tumblr

vijay

ನವದೆಹಲಿ: ಉದ್ಯಮಿ ವಿಜಯ ಮಲ್ಯಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಬ್ರಿಟನ್ ಸರ್ಕಾರ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದೆ.

ವಿಜಯ್ ಮಲ್ಯರನ್ನು ಗಡಿಪಾರು ಮಾಡುವಂತೆ ಕೇಂದ್ರ ವಿದೇಶಾಂಗ ಇಲಾಖೆ ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಿತ್ತು.

ಅನಧಿಕೃತ ಪಾಸ್ ಪೋರ್ಟ್ ಹೊಂದಿರುವ ಆಧಾರದ ಮೇಲೆ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಭಾರತ ಸರ್ಕಾರ ಕೋರಿತ್ತು, ವಿಜಯ ಮಲ್ಯ ಬ್ರಿಟನ್ ಗೆ ಬರುವಾಗ ಅವರ ಪಾಸ್ ಪೋರ್ಟ್ ರದ್ದಾಗಿರಲಿಲ್ಲ. ಅವರು ಭಾರತ ಬಿಟ್ಟು ಬ್ರಿಟನ್ ಗೆ ಬರುವಾಗ ಪಾಸ್ ಪೋರ್ಟ್ ಕಾನೂನು ಬದ್ದವಾಗಿತ್ತು. ಹೀಗಾಗಿ ಅವರನ್ನು ಬ್ರಿಟನ್ ನಿಂದ ಗಡಿಪಾರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

1971 ರ ವಲಸೆ ಕಾಯಿದೆ ಪ್ರಕಾರ ಉದ್ಯಮಿ ವಿಜಯ ಮಲ್ಯ ಅವರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ. ಎಷ್ಟು ದಿವಸ ಬೇಕೋ ಅಷ್ಟು ದಿನ ಮಲ್ಯ ಬ್ರಿಟನ್ ನಲ್ಲಿ ಇರಬಹುದು ಎಂದು ಬ್ರಿಟನ್ ಹೇಳಿದೆ.

Write A Comment