ರಾಷ್ಟ್ರೀಯ

ಭವಿಷ್ಯ ನಿಧಿ ಖಾತೆಗಳಲ್ಲಿ ₹43 ಸಾವಿರ ಕೋಟಿ ಹಣ ನಿಷ್ಕ್ರಿಯ

Pinterest LinkedIn Tumblr

parliament_CUTOUTನವದೆಹಲಿ (ಪಿಟಿಐ): ಭವಿಷ್ಯ ನಿಧಿ ಖಾತೆಗಳಲ್ಲಿ ₹43 ಸಾವಿರ ಕೋಟಿ ಹಣ ನಿಷ್ಕ್ರಿಯ ಉಳಿದ್ದಿದ್ದು, ಅದಕ್ಕೆ ಬಡ್ಡಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಲೋಕಸಭೆಯ ಪ್ರಶ್ನಾವಳಿ ಸುತ್ತಿನಲ್ಲಿ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಬಂಡಾರು ದತ್ತಾತ್ತ್ರೇಯ ಈ ವಿಷಯ ತಿಳಿಸಿದರು.
‘ಇಪಿಎಫ್‌ ಖಾತೆಗಳಲ್ಲಿ ಸುಮಾರು ₹43 ಸಾವಿರ ಕೋಟಿ ಹಣವು ನಿಷ್ಕ್ರಿಯವಾಗಿ ಉಳಿದಿದೆ’ ಎಂದರು.
ಅಲ್ಲದೇ, 2015–16ರಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ಮೂಲಕ 1.18 ಕೋಟಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಶೇಕಡ 98ರಷ್ಟು ಪ್ರಕರಣಗಳನ್ನು ಅರ್ಜಿ ಸಲ್ಲಿಸಿದ 20 ದಿನಗಳಲ್ಲಿಯೇ ಮುಕ್ತಾಯಗೊಳಿಸಲಾಗಿದೆ ಎಂದು ತಿಳಿಸಿದರು.

Write A Comment