ರಾಷ್ಟ್ರೀಯ

ಶಾ, ಜೇಟ್ಲಿ ಪ್ರದರ್ಶಿಸಿದ್ದು ‘ನಕಲಿ’ ಪದವಿಗಳು: ಎಎಪಿ

Pinterest LinkedIn Tumblr

Modi-onetwoನವದೆಹಲಿ (ಪಿಟಿಐ): ಬಿಜೆಪಿ ಪ್ರದರ್ಶಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗಳು ಹಾಗೂ ಅಂಕಪಟ್ಟಿಗಳು ‘ನಕಲಿ’ಯಾಗಿವೆ ಎಂದು ಆಮ್‌ ಆದ್ಮಿ ಪಕ್ಷವು ಸೋಮವಾರ ಆರೋಪಿಸಿದೆ.
ಎಎಪಿ ಆಗ್ರಹದ ಬೆನ್ನಲ್ಲೆ, ಮೋದಿ ಅವರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಜಂಟಿಯಾಗಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ಅವು ಪರಸ್ಪರ ತಾಳೆಯಾಗುತ್ತಿಲ್ಲ ಎಂಬುದು ಎಎಪಿ ಆರೋಪ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಮುಖಂಡ ಆಶುತೋಷ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
‘ನಕಲು ಮಾಡಲು ಕೂಡ ಬುದ್ಧಿ ಬೇಕು. ಬಿ.ಎ. ಪದವಿ ಪ್ರಮಾಣ ಪತ್ರದಲ್ಲಿ 1978ರಲ್ಲಿ ಪಾಸಾಗಿದ್ದಾರೆ ಎಂದಿದೆ. ಎಂ.ಎ ಪದವಿಯಲ್ಲಿ 1979ರ ತಾರೀಖಿದೆ. ಬಿ.ಎ ಪದವಿ ಅಂಕ ಪಟ್ಟಿಯಲ್ಲಿ ನರೇಂದ್ರ ಕುಮಾರ್‌ ದಾಮೋದರ್‌ದಾಸ್‌ ಮೋದಿ ಎಂದಿದ್ದರೆ, ಎಂ.ಎ ದಾಖಲೆಯಲ್ಲಿ ನರೇಂದ್ರ ದಾಮೋದರ್‌ದಾಸ್‌ ಮೋದಿ ಎಂದಿದೆ’ ಎಂ‌ದರು.
ಅಲ್ಲದೇ, ಬಿ.ಎ ಅಂಕಪಟ್ಟಿಯಲ್ಲಿ ಅಡ್ಡ ಹೆಸರು ಕೂಡ ಭಿನ್ನವಾಗಿದೆ. ಒಂದೆಡೆ ‘Modi’ ಎಂದಿದೆ. ಮತ್ತೊಂದೆಡೆ, ‘Mody’ ಎಂದಿದೆ ಎಂದು ಅವರು ತಿಳಿಸಿದರು.
ಬಿ.ಎ ಪದವಿ ಓದಿನ ವೇಳೆ ಮೋದಿ ಅವರೊಮ್ಮೆ ಅನುತೀರ್ಣರಾಗಿದ್ದರು ಎಂದು ಅವರು ಆರೋಪಿಸಿದರು.
‘ಪದವಿಯನ್ನು ನಕಲು ಮಾಡಲಾಗಿದೆ ಎಂಬುದನ್ನು ನಾವು ಸಾಬೀತು ಪಡಿಸಿದ್ದೇವೆ. ನಕಲಿ ಮಾಡುವುದು ಅಪರಾಧವಾಗಿದ್ದು, ಅದಕ್ಕಾಗಿ ಅಮಿತ್, ಅರುಣ್ ಜೇಟ್ಲಿ ಹಾಗೂ ಮೋದಿ ಅವರು ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

Write A Comment