ರಾಷ್ಟ್ರೀಯ

ರಾಜ್ಯದ 27 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ

Pinterest LinkedIn Tumblr

waterನವದೆಹಲಿ(ಪಿಟಿಐ): ಕರ್ನಾಟಕದ 27 ಜಿಲ್ಲೆಗಳು ಸೇರಿದಂತೆ ರಾಷ್ಟ್ರದ 13 ರಾಜ್ಯಗಳ 308 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ ಎಂದು ರಾಜ್ಯಸಭೆಗೆ ಸೋಮವಾರ ತಿಳಿಸಲಾಯಿತು.
ಕರ್ನಾಟಕ, ಉತ್ತರ ಪ್ರದೇಶ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸಗಡ, ಬಿಹಾರ, ಜಾರ್ಖಂಡ, ಹರಿಯಾಣ, ಗುಜರಾತ್, ರಾಜಸ್ತಾನ ರಾಜ್ಯಗಳ 308 ಜಿಲ್ಲೆಗಳು ಕುಡಿಯುವ ನೀರಿನ ಕೊರತೆ ಎದುರಾಗಿರುವುದಾಗಿ ರಾಜ್ಯಗಳು ವರದಿ ಮಾಡಿವೆ ಎಂದು ಕೇಂದ್ರ ಕುಡಿಯುವ ನೀರು ನೈರ್ಮಲ್ಯ ರಾಜ್ಯ ಖಾತೆ ಸಚಿವ ರಾಮ್ ಕೃಪಾಲ್ ಯಾದವ್ ಅವರು, ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಪರಿಹಾರಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದರು.
ಹೆಚ್ಚು ನೀರಿನ ಕೊರತೆ ಎದುರಿಸುತ್ತಿರುವ ಉತ್ತರ ಪ್ರದೇಶದಲ್ಲಿ 50 ಜಿಲ್ಲೆ, ಮಧ್ಯಪ್ರದೇಶದಲ್ಲಿ 46 ಜಿಲ್ಲೆಗಳಲ್ಲಿ ಸಮಸ್ಯೆ ಎದುರಾಗಿದೆ. ಮಹಾರಾಷ್ಟ್ರದ 33 ಜಿಲ್ಲೆ, ಕರ್ನಾಟಕದ 27 ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತೀವ್ರ ಕೊರತೆಯಾಗಿದೆ ಎಂದು ಮಾಹಿತಿ ನೀಡಿದರು.
ನೀರಿನ ಕೊರತೆ ಎದುರಿಸುತ್ತಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ(ಎನ್‌ಆರ್‌ಡಿಡ್ಲ್ಯುಪಿ) ಅಡಿ ತಾಂತ್ರಿಕ ಹಾಗೂ ಹಣಕಾಸಿನ ನೆರವನ್ನು ಒದಗಿಸಿದೆ ಎಂದು ಹೇಳಿದರು.
ಎನ್‌ಆರ್‌ಡಿಡ್ಲ್ಯುಪಿ ಅಡಿ ಶೇಕಡಾ 10ರಷ್ಟು ಹಣವನ್ನು 2015–2016ನೇ ಸಾಲಿನಲ್ಲಿ ಮಳೆನೀರು ಸಂಗ್ರಹಣೆ ಕಾರ್ಯಕ್ಕೆ ವೆಚ್ಚ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

Write A Comment