ಮನೋರಂಜನೆ

ಭಾರತದಾಚೆಗೆ ಐಪಿಎಲ್ ಸ್ಥಳಾಂತರಕ್ಕೆ ಶಾರುಖ್ ಖಾನ್ ಸಹಮತವಿಲ್ಲ

Pinterest LinkedIn Tumblr

Shahruk Khan

ನವದೆಹಲಿ: ತೀವ್ರ ಬರಗಾಲದ ಹಿನ್ನಲೆಯಲ್ಲಿ ಭಾರತದಿಂದ ಐಪಿಎಲ್ ಅನ್ನು ಸ್ಥಳಾಂತರಿಸುವ ಮಾತುಕತೆ ನಡೆಯುತ್ತಿರು ಬೆನ್ನಲ್ಲೇ ಬಾಲಿವುಡ್ ನಟ ಮತ್ತು ಕೆಕೆಆರ್ ತಂಡದ ಸಹ ಮಾಲೀಕ ಶಾರುಖ್ ಖಾನ್ ಭಾರತದಿಂದ ಐಪಿಎಲ್ ಪಂದ್ಯಗಳ ವರ್ಗಾವಣೆ ವಿಚಾರವಾಗಿ ನನ್ನ ಸಹಮತವಿಲ್ಲ ಎಂದು ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಟ ಶಾರುಖ್, “ಭಾರತದಲ್ಲಿ ಅಪಾರವಾದ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಆದ್ದರಿಂದ ಭಾರತದಲ್ಲಿನ ಐಪಿಎಲ್ ಪಂದ್ಯಗಳಿಗೆ ಭರ್ಜರಿ ಬೇಡಿಕೆ ಬರುವುದರ ಜತೆಗೆ ಅಧಿಕ ಲಾಭ ಸಾಧ್ಯವಾಗುತ್ತದೆ. ಭಾರತದಲ್ಲಿ ಆರಂಭವಾದ ಚುಟುಕು ಕ್ರಿಕೆಟ್ ಭಾರತದಲ್ಲಿಯೇ ಭದ್ರವಾಗಿ ನೆಲೆಯೂರುವಂತೆ ಮಾಡಬೇಕು. ಸಮಸ್ಯೆಗಳು ಎಲ್ಲಾ ದೇಶಗಳಲ್ಲಿಯೂ ಇರುತ್ತವೆ. ಹಾಗಂತ ಪಂದ್ಯಗಳನ್ನು ವರ್ಗಾವಣೆ ಮಾಡುವುದು ತಪ್ಪು.ಇದರಿಂದ ಸ್ಥಳೀಯ ಅಭಿಮಾನಿಗಳಿಗೆ ಬೇಸರವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಪಂದ್ಯ ಸ್ಥಳಾಂತರ ಕುರಿತು ಪ್ರತಿಕ್ರಿಯಿಸಿ, ಭಾರತದಲ್ಲಿ ಪಂದ್ಯಗಳ ಆಯೋಜನೆಗೆ ನೀರಿನ ಸಮಸ್ಯೆ, ಚುನಾವಣೆ ಸೇರಿದಂತೆ ಹಲವು ವಿಘ್ನಗಳು ಎದುರಾಗಿವೆ. ಆದ್ದರಿಂದ ಮುಂದಿನ ಆವೃತ್ತಿಯನ್ನು ವಿದೇಶದಲ್ಲಿ ಆಯೋಜಿಸುವ ಕುರಿತು ಚಿಂತಿಸಲಾಗಿದೆ ಎಂದು ಹೇಳಿದ್ದರು.

2009ರಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಐಪಿಎಲ್ ಪಂದ್ಯಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಇನ್ನು 2014ರಲ್ಲಿ ಮೊದಲ 14 ಪಂದ್ಯಗಳನ್ನು ದುಬೈಯಲ್ಲಿ ನಡೆಸಲಾಗಿತ್ತು.

Write A Comment