ರಾಷ್ಟ್ರೀಯ

ಶವ ಯಾತ್ರೆಯ ವಾಹನದಲ್ಲೇ ಮತ ಯಾಚನೆ ಮಾಡಿದ ಅಮ್ಮ ಜಯಲಲಿತಾ ..!

Pinterest LinkedIn Tumblr

jayaಚನ್ನೈ, ಮೇ 7- ಇದೇನು ನಂಬಿಕೆಯೋ, ಮೂಢ ನಂಬಿಕೆಯೋ, ಅದೃಷ್ಟವೋ ಅಥವಾ ದುರದೃಷ್ಟವೋ ಗೊತ್ತಿಲ್ಲ. ಜನರೇ ಅದನ್ನು ನಿರ್ಧರಿಸಬೇಕು. ವಿಷಯ ಏನೂಂತ ಓದಿ…..ತಮಿಳುನಾಡಿನ ಅಧಿಕೃತ ಅಮ್ಮ ಎಂದೇ ಖ್ಯಾತಿ ಪಡೆದಿರುವ ಮುಖ್ಯಮಂತ್ರಿ ಜಯಲಲಿತಾ ಅವರು ಈಗಾಗಲೇ ತನ್ನ ಪ್ರಜೆಗಳಿಗೆ ಸಾಕಷ್ಟು ಉಚಿತ ಕೊಡುಗೆಗಳನ್ನು ನೀಡಿ ಹೆಸರು ಮಾಡಿರುವುದು ಎಲ್ಲರಿಗೂ ಗೊತ್ತು. ಆದರೆ, ಸಿಎಂ ಜಯಲಲಿತಾ ಅವರು ಈ ಬಾರಿ ಪುನರಾಯ್ಕೆ ಬಯಸಿ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇನ್ನು 8 ದಿನಗಳಲ್ಲಿ ಮತದಾನವೂ ನಡೆಯಲಿದೆ.

ಇಲ್ಲೇ ಈಗ ಸಮಸ್ಯೆ ಎದುರಾಗಿರುವುದು. ಅಮ್ಮ ನಿನ್ನೆ ತನ್ನ ಸ್ವಕ್ಷೇತ್ರ ಆರ್.ಕೆ.ನಗರದಲ್ಲಿ ಪ್ರಚಾರಕ್ಕಾಗಿ ಆಗಮಿಸಿದರು. ಈ ವೇಳೆ ವಿಶೇಷ ಎಂದರೆ ಅಮ್ಮಗೆ ಎದುರಾಗಿ ಎರಡು ಶವಗಳ ಮೆರವಣಿಗೆಗಳು ಬಂದವು. ಸಾಲಂಕೃತ ವಾಹನಗಳಲ್ಲಿ ಶವಗಳನ್ನಿರಿಸಿ ವಿಶೇಷವಾಗಿ ಈ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು. ವಾಹನಗಳಲ್ಲಿ ತುಂಬಾ ಎಐಎಡಿಎಂಕೆ ಕಾರ್ಯಕರ್ತರು, ಪಕ್ಷದ ಧ್ವಜ ಮತ್ತು ಅಮ್ಮನ ಭಾವಚಿತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರು. ಯಾವುದೇ ಕಾರ್ಯಕ್ಕೆ ಹೋಗುವಾಗ ಶವಯಾತ್ರೆ ಎದುರಾದರೆ ಶುಭವಂತೆ. ಎಐಎಡಿಎಂಕೆ ಕಾರ್ಯಕರ್ತರ ಪ್ರಕಾರ !

ಇನ್ನು ಅದ್ಧೂರಿಯಾಗಿ ಅಲಂಕೃತಗೊಂಡ ವೇದಿಕೆಯಲ್ಲಿ ಎಂಜಿಆರ್-ಜಯಲಲಿತಾ ಮೇಕಪ್‌ತೊಟ್ಟ ಕಲಾವಿದ-ಕಲಾವಿದೆ ಅವರದೇ ಹಳೇ ಚಿತ್ರದ ಹಾಡಿಗೆ ಎಂಜಿಆರ್- ಜಯಾ ಶೈಲಿಯಲ್ಲೇ ನೃತ್ಯ ಮಾಡಿ ಜನರಲ್ಲಿ ಅಚ್ಚರಿ ಮೂಡಿಸಿದ ವಿಶೇಷವೂ ನಡೆಯಿತು.ಅಷ್ಟೇ ಅಲ್ಲ ಭಾರೀ ಬಿಗಿ ಭದ್ರತೆಯಲ್ಲೂ ವಿಶೇಷ ವಾಹನದಲ್ಲಿ ಬಂದ ಅಮ್ಮ ಆ ವಾಹನದಲ್ಲೇ ಮೇಲಕ್ಕೆ ಬಂದು ( ಆಟೋಮೇಟಿಕ್) ಭಾಷಣ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಒಟ್ಟಾರೆ ಶವಯಾತ್ರೆಯ ಫಲವೇನು ಎಂಬುದು ಒಂದು ಪ್ರಶ್ನೆಯಾದರೆ, ಇದಕ್ಕಿಂತ ದೊಡ್ಡ ಪ್ರಶ್ನೆ ಈ ಜೋಡಿ ಶವ ಎಲ್ಲಿಂದ ಬಂದವು ಎಂಬುದು ! ಈ ಕ್ಷೇತ್ರದಲ್ಲಿ ಜಯಾ ವಿರುದ್ಧ ಡಿಎಂಕೆಯ ಶಿಮ್ಲಾ ಮತ್ತು ಚೋಳನ್, ಪಿಎಂಕೆಯ ಪಿ.ಆಗ್ನೆಸ್ ಹಾಗೂ ಮನೋನ್ಮಣೆಯಮ್ ಸುಂದರನಾರ್ ವಿಶ್ವವಿದ್ಯಾನಿಲಯದ ಉಪಕುಲಪತಿ ವಸಂತಿದೇವಿ(ವಿಸಿಕೆ) ಕಣದಲ್ಲಿದ್ದಾರೆ.

Write A Comment