ರಾಷ್ಟ್ರೀಯ

ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಕಾಮುಕಗೆ ಮರಣದಂಡನೆ

Pinterest LinkedIn Tumblr

sentenced-to-death

ಮುಂಗರ್: ಅಪ್ರಾಪ್ತ ಬಾಲಕನನ್ನು ಅಪಹರಣ ಮಾಡಿದಲ್ಲದೇ, ಆತನ ಮೇಲೆ ಅತ್ಯಾಚಾರವೆಸಗಿ, ಹತ್ಯೆಗೈದ ಅಪರಾಧಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿದೆ.

ಸೆಷನ್ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೋತಿ ಸ್ವರೂಪ್ ಶ್ರೀವತ್ಸವ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಮನೀಶ್ ಮಂಡಲ್ ಅಲಿಯಾಸ್ ನೇಪಾಲಿ ಮಂಡಲ್ ಅಪರಾಧಿಗೆ ಐಪಿಸಿ 302(ಕೊಲೆ), 377(ಅಸ್ವಾಭಾವಿಕ ಲೈಂಗಿಕ) ಮತ್ತು 364(ಕೊಲೆಗೆ ಸಂಚು ರೂಪಿಸಿ ಅಪಹರಣ)ದಡಿ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದ್ದು, ರು.5000 ದಂಡವನ್ನು ವಿಧಿಸಿದೆ.

2012ರಲ್ಲಿ ಮುಂಗರ್ ಜಿಲ್ಲೆಯ ಜಮಲ್ ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ವರ್ಷದ ಬಾಲಕನನ್ನು ಮನೀಶ್ ಮಂಡಲ್, ಅಮಿತ್ ಜಾ ಮತ್ತು ಮನೋಜ್ ಕುಮಾರ್ ಎಂಬ ಕಿಡಿಗೇಡಿಗಳು ಅಪಹರಿಸಿದ್ದರು.

ತದ ನಂತರ ಬಾಲಕನ ಪೋಷಕರಿಗೆ ಕರೆ ಮಾಡಿದ ದುಷ್ಕರ್ಮಿಗಳು ಹಣದ ಬೇಡಿಕೆ ಇಟ್ಟಿದ್ದಾರೆ. ಅವರು ಕೇಳಿದಷ್ಟು ಹಣ ಪೋಷಕರು ನೀಡಲಾಗದ ಕಾರಣ ಆ ಬಾಲಕನ ಮೇಲೆ ಅತ್ಯಾಚಾರವೆಸಗಿ, ಹತ್ಯೆಗೈದಿದ್ದಾರೆ. ಪ್ರಕರಣ ಸಂಬಂಧ ಮನೀಷ್ ಮಂಡಲ್ ಸಿಕ್ಕಿ ಬಿದ್ದಿದ್ದು, ಅಮಿತ್ ಜಾ ಮತ್ತು ಮನೋಜ್ ಕುಮಾರ್ ತಲೆ ಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Write A Comment