ಮನೋರಂಜನೆ

ಹೃತಿಕ್ ರೋಷನ್ ವಿರುದ್ಧ ಕಂಗನಾ ರಣಾವತ್‌ಳ ಏಕಾಂಗಿ ಹೋರಾಟಕ್ಕೆ ವಿದ್ಯಾಬಾಲನ್ ಬೆಂಬಲ

Pinterest LinkedIn Tumblr

Vidya Balan- Kangana Ranaut

ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧ ಏಕಾಂಗಿಯಾಗಿ ಕಾನೂನು ಹೋರಾಟ ಮಾಡುತ್ತಿರುವ ನಟಿ ಕಂಗನಾ ರಣಾವತ್‌ಗೆ ನಟಿ ವಿದ್ಯಾಬಾಲನ್ ಬೆಂಬಲ ಸೂಚಿಸಿದ್ದಾರೆ.

ಕಂಗನಾ ಅನ್ಯಾಯದ ವಿರುದ್ಧ ಮಾತೆತ್ತಿ ಹೋರಾಟ ಮಾಡುತ್ತಿದ್ದಾಳೆ. ಈ ಪ್ರಕರಣದ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ ಕಂಗನಾಳ ಧೈರ್ಯವನ್ನು ನಾನು ಶ್ಲಾಘಿಸುತ್ತೇನೆ.

ಒಬ್ಬ ಮಹಿಳೆಯಾಗಿ ಏಕಾಂಗಿಯಾಗಿ ಹೋರಾಟ ಮಾಡುವುದು ಅಷ್ಟು ಸುಲಭವಲ್ಲ. ನಾವು ನಮ್ಮ ಅಪ್ಪನ, ಗಂಡನ, ಮಕ್ಕಳ ಮತ್ತು ಹೆತ್ತವರ ಪರವಾಗಿ ಹೋರಾಟ ಮಾಡುತ್ತೇವೆ. ಆದರೆ ನಮಗಾಗಿ ನಾವು ದನಿಯೆತ್ತಿ ಹೋರಾಟ ಮಾಡಲು ಹೋಗುವುದಿಲ್ಲ. ಆಕೆಯ ಆ ಶಕ್ತಿಯನ್ನು ನಾನು ಪ್ರಶಂಸಿಸುತ್ತೇನೆ ಎಂದು ವಿದ್ಯಾಬಾಲನ್ ಹೇಳಿದ್ದಾರೆ.

Write A Comment