ಮನೋರಂಜನೆ

ಜಿಶಾ ಅತ್ಯಾಚಾರ ಪ್ರಕರಣ: ಹೆಣ್ಣು ಮಕ್ಕಳಿಗೆ ಭಾರತ ಸುರಕ್ಷಿತವಲ್ಲ ಎಂಬ ಪ್ರಿಯಾಮಣಿ ಟ್ವೀಟ್ ಗೆ ಆಕ್ರೋಶ…ಶಾರೂಖ್ ಖಾನ್ ಐಟಂ ಗರ್ಲ್ – ಅಮೀರ್ ಖಾನ್ ಸಹೋದರಿ ಎಂದು ಟ್ವೀಟ್

Pinterest LinkedIn Tumblr

priyamani

ಮುಂಬಯಿ: ಕೇರಳ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಜಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ನಟಿ ಪ್ರಿಯಾಮಣಿ ಟ್ವೀಟ್ ಮಾಡಿದ್ದು ಈಗ ದೊಡ್ಡ ವಿವಾದವಾಗಿದೆ.

ಭಾರತ ಈಗ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ, ಭಾರತ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗಿ ಎಂದು ಕರೆ ನೀಡಿದ ಪ್ರಿಯಾಮಣಿಯನ್ನು ‘ಅಮೀರ್ ಖಾನ್ ಸೋದರಿ’ ಎಂದು ಗೇಲಿ ಮಾಡಿ ಟ್ವೀಟ್ ಗಳ ಮೂಲಕ ತಿರುಗೇಟು ನೀಡಲಾಗಿದೆ.

ಭಾರತ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲ, ಪರಿಸ್ಥಿತಿ ಹೀಗೆ ಮುಂದುವರಿದರೆ, ಭಾರತದ ಮಹಿಳೆಯರೇ ಮತ್ತು ಹುಡುಗಿಯರು, ಭಾರತ ಬಿಟ್ಟು ಸುರಕ್ಷಿತವಾದ ಬೇರೆ ಯಾವುದಾದರೂ ಸ್ಥಳದಲ್ಲಿ ವಾಸಿಸುವುದು ಉತ್ತಮ ಎಂದು ಟ್ವೀಟ್ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಶಾರೂಖ್ ಖಾನ್ ಐಟಂ ಗರ್ಲ್ ಪ್ರಿಯಾಮಣಿ ಅಮೀರ್ ಖಾನ್ ಸಹೋದರಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಟ್ವೀಟ್ ಗಳ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಿಯಾಮಣಿ, ನಾನು ನಡೆದಿರುವ ಹಾಗೂ ನಡೆಯುತ್ತಿರುವ ಕೆಲವು ಅಹಿತಕರ ಘಟನೆಗಳ ಬಗ್ಗೆ ಕೇವಲ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ, ಇದು ಹೇಗೆ ದೇಶ ವಿರೋಧಿಯಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇಷ್ಟಾಗಿಯೂ ಪ್ರಿಯಾಮಣಿ ವಿರುದ್ಧ ಟ್ವೀಟ್ ಮಾಡುವುದು ಮಾತ್ರ ನಿಂತಿಲ್ಲ.

Write A Comment