ರಾಷ್ಟ್ರೀಯ

ಚಿನ್ನಾಭರಣ ಮೇಲಿನ ಶೇ.1 ಅಬಕಾರಿ ಸುಂಕ ರದ್ದು ಇಲ್ಲ- ಜೇಟ್ಲಿ

Pinterest LinkedIn Tumblr

jetlyನವದೆಹಲಿ: ಚಿನ್ನ ಸೇರಿದಂತೆ ಬೆಳ್ಳಿಯೇತರ ಆಭರಣಗಳ ಮೇಲೆ ವಿಧಿಸಲಾದ ಶೇಕಡಾ 1 ಅಬಕಾರಿ ಸುಂಕವನ್ನು ಹಿಂತೆಗೆದುಕೊಳ್ಳಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ನಿರಾಕರಿಸಿದ್ದಾರೆ.

ವಿತ್ತ ಮಸೂದೆ 2016ರ ಮೇಲೆ ನಡೆದ ಚರ್ಚೆಗೆ ಲೋಕಸಭೆಯಲ್ಲಿ ಉತ್ತರ ನೀಡಿದ ಸಚಿವರು ಸರ್ಕಾರದ ನಿಲುವಿಗೆ ಭದ್ರವಾಗಿ ಅಂಟಿಕೊಂಡು ‘ಅಬಕಾರಿ ಸುಂಕವು ಸಣ್ಣ ವರ್ತಕರು ಮತ್ತು ಕುಶಲಕರ್ಮಿಗಳಿಗೆ ಅನ್ವಯಿಸುವುದಿಲ್ಲ. 12 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವಹಿವಾಟು ನಡೆಸುವ ಚಿನ್ನಾಭರಣ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದರು.

‘ಸೂಟ್ ವಿರೋಧ ಮತ್ತು ಚಿನ್ನ ಪ್ರೇಮಿ ರಾಜಕೀಯವನ್ನು ನನಗೆ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ’ ಎಂದು ಚುಚ್ಚಿದ ಜೇಟ್ಲಿ, ಚಿನ್ನ ಹಾಗೂ ಇತರ ಅಭರಣಗಲ ಮೇಲಿನ ಅಬಕಾರಿ ಸುಂಕವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಸುಂಕವನ್ನು ವಿರೋಧಿಸುವುದಾದರೆ ಅದು ಕಾಂಗ್ರೆಸ್ ಆಡಳಿತ ಇರುವ ಕೇರಳದಲ್ಲಿ ಚಿನ್ನದ ಮೇಲೆ ವಿಧಿಸಲಾಗಿರುವ ಶೇಕಡಾ 5 ವ್ಯಾಟ್ನ್ನು ತೆಗೆದುಹಾಕುವುದರೊಂದಿಗೆ ಆರಂಭವಾಗಬೇಕು’ ಎಂದು ಜೇಟ್ಲಿ ನುಡಿದರು.

ಚಿನ್ನಾಭರಣಗಳ ಮೇಲಿನ ಅಬಕಾರಿ ಸುಂಕವನ್ನು ವಿರೋಧಿಸಿದ ಚಿನ್ನಾಭರಣ ವರ್ತಕರು ದೇಶವ್ಯಾಪಿ ಮುಷ್ಕರವನ್ನೂ ನಡೆಸಿದ್ದರು.

Write A Comment