ರಾಷ್ಟ್ರೀಯ

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯ ಮಂಚದ ಮೇಲೆ ಕಾಲಿಟ್ಟು ದರ್ಪ ತೋರಿದ ಐಎಎಸ್ ಅಧಿಕಾರಿ ಫೋಟೋ ವೈರಲ್ ಆಯ್ತು !

Pinterest LinkedIn Tumblr

jagadish

ರಾಯಪುರ: ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಐಎಎಸ್ ಅಧಿಕಾರಿಯೊಬ್ಬರು ರೋಗಿಯ ಮಂಚದ ಮೇಲೆ ಕಾಲಿಟ್ಟುಕೊಂಡು ಮಾತನಾಡಿ, ತಮ್ಮ ಅಧಿಕಾರ ದರ್ಪ ತೋರಿರುವ ಘಟನೆ ರಾಯಪುರದಲ್ಲಿ ನಡೆದಿದೆ.

ಛತ್ತೀಸ್ ಗಡದ ಐಎಎಸ್ ಅಧಿಕಾರಿ ಡಾ. ಜಗದೀಶ್ ಸೋಂಕರ್ ತಮ್ಮ ಈ ವರ್ತನೆಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಅನಾರೋಗ್ಯ ಪೀಡಿತ ಮಗುವಿನ ಜೊತೆ ಕುಳಿತಿದ್ದ ಮಹಿಳೆಯ ಮಂಚದ ಮೇಲೆ ಐಎಎಸ್ ಅಧಿಕಾರಿ ಜಗದೀಶ್ ತಮ್ಮ ಕಾಲನ್ನು ಇಟ್ಟು ಮಾತನಾಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಂಥಹ ಅಚಾತುರ್ಯ ನಡೆಯುವುದನ್ನು ತಪ್ಪಿಸಬೇಕಿತ್ತು, ದುರಾದೃಷ್ಟವಶಾತ್ ಆಗಿಬಿಟ್ಟಿದೆ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದು ಐಎಎಸ್ ಅಧಿಕಾರಿ ಜಗದೀಶ್ ಸೋರಂಕ್ ಸ್ಪಷ್ಟನೆ ನೀಡಿದ್ದಾರೆ.

Write A Comment