ರಾಷ್ಟ್ರೀಯ

ಪಂಚತಂತ್ರ, ವಿಕ್ರಮ-ಬೇತಾಳ ಕಥೆಗಳು ಈಗ ಆಪ್ ರೂಪದಲ್ಲಿ!

Pinterest LinkedIn Tumblr

Vikram-Betal

ನವದೆಹಲಿ: ಜನಪ್ರಿಯ ಭಾರತೀಯ ಕಥಾ ಜಗತ್ತಿಗೆ ಮಕ್ಕಳು ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುವಂತೆ ಪಂಚತಂತ್ರ, ವಿಕ್ರಮ-ಬೇತಾಳ, ಮಾಲ್ಗುಡಿ ದಿನಗಳು ಮತ್ತಿತರ ಕಥೆಗಳ ವಿಡಿಯೋ ಮನರಂಜನಾ ಆಪ್ ನೆಕ್ಸ್ಟ್ ಜಿಟಿವಿ ಕಿಡ್ಸ್ ನನ್ನು ನೆಕ್ಸ್ಟ್ ಜಿಟಿವಿ ಸೋಮವಾರ ಬಿಡುಗಡೆ ಮಾಡಿದೆ.

ಈ ಅದ್ಭುತ ಮತ್ತು ರಂಜಿತ ಕಥೆಗಳು ಮತ್ತು ಪಾತ್ರಗಳಲ್ಲಿ ಮಕ್ಕಳು ಕಳೆದು ಹೋಗಲು ಮತ್ತಷ್ಟೇ ಅಲ್ಲದೆ ಅವರು ಬೆಳೆದಂತೆ ಆರೋಗ್ಯಕರ ವೈಚಾರಿಕ ಪರಿಸರ ಅವರ ಸುತ್ತ ಸೃಷ್ಟಿಸಲು ಈ ಆಪ್ ಸಹಕಾರಿಯಾಗಲಿದೆ ಎಂದು ನೆಕ್ಸ್ಟ್ ಜಿಟಿವಿ ತಿಳಿಸಿದೆ.

“ಈ ಆಪ್ ನ ಕಾರ್ಯಕ್ರಮಗಳನ್ನು ಮತ್ತು ಮನರಂಜನೆಯನ್ನು ಬಹಳ ಯೋಚಿಸಿ ಆರಿಸಿದ್ದೇವೆ. ಮಕ್ಕಳಿಗೆ ಕಲಿಯಲು ಮತ್ತು ಮನರಂಜಿಸಲು ಇವು ಪ್ರೇರೇಪಿಸುತ್ತವೆ. ಯಾವುದೇ ಜಾಹೀರಾತು ಇಲ್ಲದ, ಅಡಚಣೆ ಇಲ್ಲದ ಸುರಕ್ಷಿತ ಪರಿಸರದಲ್ಲಿ ಮಕ್ಕಳು ಈ ಕಾರ್ಯಕ್ರಮಗಳನ್ನು ಸವಿಯಬಹುದಾಗಿದೆ. ಮಕ್ಕಳು ಒಳ್ಳೆಯ ಪರಿಸರದಲ್ಲಿ ಇವುಗಳನ್ನು ನೋಡುತ್ತಾರೆ ಎಂದು ಪೋಷಕರು ನೆಮ್ಮದಿಯಿಂದರಬಹುದು” ಎಂದು ನೆಕ್ಸ್ಟ್ ಜಿಟಿವಿ ಸಿ ಒ ಒ ಅಭೇಶ್ ವರ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಂಡ್ರ್ಯಾಡ್ ಫೋನ್ ಗಳ ‘ಗೂಗಲ್ ಪ್ಲೇ’ ಮತ್ತು ಆಪಲ್ ಫೋನ್ ಗಳ ‘ಐ ಟ್ಯೂನ್ಸ್’ ನಲ್ಲಿ ಈ ಆಪ್ ಭ್ಯವಿದೆ. ಅಲ್ಲದೆ ಕಾರ್ಟೂನ್ ನೆಟ್ವರ್ಕ್ ಮತ್ತು ಪೋಗೋ ಅಂತಹ ವಾಹಿನಿಗಳನ್ನು ನೇರಪ್ರಸಾರದಲ್ಲಿ ನೋಡುವ ಅವಕಾಶವನ್ನೂ ಆಪ್ ಒದಗಿಸಿಕೊಡಲಿದೆ.

Write A Comment