ರಾಷ್ಟ್ರೀಯ

3ನೇ ಬಾರಿಯು ಹೆಣ್ಣುಮಗು; ಭ್ರಮನಿರಸನಗೊಂಡ ಪೋಷಕರಿಂದ ಶಿಶುಹತ್ಯೆ

Pinterest LinkedIn Tumblr

arrested

ಮಿಡ್ನಾಪುರ್: ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಪೋಷಕರಿಗೆ 3ನೇ ಬಾರಿಯ ಹೆಣ್ಣು ಮಗು ಜನಿಸಿದ್ದರ ರಿಂದ ಅಸಮಾಧಾನಗೊಂಡ ತಂದೆ ತಾಯಿ ತಮ್ಮ 22 ದಿನದ ಮಗುವನ್ನು ಕೊಂದಿರುವ ಘಟನೆ ಪಿಂಗಳಾ ಪ್ರದೇಶದ ಮಿಡ್ನಾಪುರದಲ್ಲಿ ನಡೆದಿದೆ.

ದುರ್ಗಾ ಶಂಕರ್ ಮಂಡಲ್ ಮತ್ತು ರಿಂಕು ಮಂಡಲ್ ಗೆ ಈ ಮೊದಲು ಎರಡು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗುವಿಗಾಗಿ ಹಂಬಲಿಸುತ್ತಿದ್ದ ದಂಪತಿಗೆ 3ನೇ ಮಗುವು ಹೆಣ್ಣುಮಗುವೇ ಜನಿಸಿದ್ದರಿಂದ ತಮ್ಮ 22ನೇ ದಿನದ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾರೆ.

ಕರ್ಕುರಿ ಗ್ರಾಮದವರಾದ ಈ ದಂಪತಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿರುವುದಾಗಿ ಸೂಪರಿಂಟೆಂಡ್ ಆಫ್ ಪೊಲೀಸ್ ಬಿ.ಚಂದ್ರಶೇಖರ್ ತಿಳಿಸಿದ್ದಾರೆ.

Write A Comment