ರಾಷ್ಟ್ರೀಯ

ಉಗ್ರರಿಗೆ ಸ್ಥಳೀಯರಿಂದ ಪೂರ್ಣ ಬೆಂಬಲ: ಭದ್ರತಾ ಪಡೆಗೆ ಭಾರೀ ತಲೆನೋವು

Pinterest LinkedIn Tumblr

terristಶ್ರೀನಗರ,ಮೇ೨- ಉಗ್ರರ ಖಾಯಂ ನೆಲೆಯಂತಿರುವ ಜಮ್ಮುಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚಿನ ಸಂಖ್ಯೆಯ ಸ್ಥಳೀಯ ಯುವಕರು ಅವರ ಬೆಂಬಲಿಗರಾಗಿರುವುದು ಭದ್ರತಾ ಪಡೆಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಲಷ್ಕರ್-ಎ-ತಯ್ಬಾ ಸಂಘಟನೆಯ ಭಯೋತ್ಪದಕನ ಮೃತದೇಹದ ಅಂತ್ಯ ಸಂಸ್ಕಾರ ನಡೆಯುತ್ತಿದ್ದ ಸ್ಥಳಕ್ಕೆ ಮೋಟಾರ್ ಬೈಕ್ಗಳ ಮೇಲೆ ಬಿರುಗಾಳಿಯಂತೆ ನುಗ್ಗಿದ ನೂರಕ್ಕೂ ಹೆಚ್ಚು ಯುವಕರು ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿ ಮೃತ ಉಗ್ರನಿಗೆ ಗೌರವಸ ಸೂಚಿಸಿ ಹೊರಟು ಹೋಗಿದ್ದರು.

ಗಡಿಯಲ್ಲಿ ಒಳನುಸುಳುವ ಪ್ರಯತ್ನಗಳಲ್ಲಿ ಹತರಾಗುವ ಎಲ್ಲಾ ಉಗ್ರರನ್ನು ಬಹುತೇಕ ಸ್ಥಳೀಯ ಯುವಕರು ಹುತಾತ್ಮರೆಂದೇ ಪರಿಗಣಿಸುತ್ತಾರೆ.

ಆ ಘಟನೆಯ ಬಳಿಕ ಕಾಶ್ಮೀರದ ಇನ್ನೊಂದು ಜಿಲ್ಲೆ ಕುಲ್ಗಾಮ್ನಲ್ಲಿ ಮತ್ತೊಬ್ಬ ಉಗ್ರನ ಅಂತ್ಯಕ್ರಿಯೆ ಸಂದರ್ಭದಲ್ಲಿ ಅನೇಕ ಯುವಕ, ಯುವತಿಯರು ಸ್ಥಳಕ್ಕೆ ಧಾವಿಸಿ ಮೃತ ಉಗ್ರನಿಗೆ ನಮನ ಸಲ್ಲಿಸಿ ಹೋಗಿದ್ದರು.
ಈ ಘಟನೆಗಳ ನಂತರ ಇತ್ತೀಚೆಗೆ ಗಡಿಯಲ್ಲಿ ನಡೆದ ಉಗ್ರರ ಬೇಟೆ ಸಂದರ್ಭ ಒಬ್ಬ ಲಷ್ಕರ್-ಎ-ತೊಯ್ಬ(ಎಲ್ಇಟಿ) ಕಮಾಂಡರ್ ಹಾಗೂ ನಾಲ್ವರು ಭಯೋತ್ಪಾದಕರು ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದು ಕೂಡ ಸ್ಥಳೀಯ ಯುವಕರ ಬೆಂಬಲದಿಂದಲೇ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ.

ವಾಸ್ತವವಾಗಿ ಇಲ್ಲಿರುವುದು ಕೇವಲ ೨೦೦ ಮಂದಿ ಭಯೋತ್ಪಾದಕರು, ಬಹುತೇಕ ಉಗ್ರರು ದಕ್ಷಿಣ ಕಾಶ್ಮೀರ ಪ್ರದೇಶದಲ್ಲೇ ಹೆಚ್ಚು ಕೇಂದ್ರಿತರಾಗಿದ್ದಾರೆ. ಏಕೆಂದರೆ ಅಲ್ಲಿ ಸಾವಿರಾರು ಜನ ಅವರಿಗೆ ಬೆಂಬಲಿಗರಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ನಮಗೆ ಉಗ್ರರ ಬೇಟೆ ನಿರಾಯಾಸವಾಗಿತ್ತು. ಆದರೆ ಈಗಿನ ಚಿತ್ರಣ ಬದಲಾಗಿದೆ. ಸಾವಿರಾರು ಮಂದಿ ಸ್ಥಳೀಯರು ಉಗರ ಬೆಂಬಲಕ್ಕೆ ನಿಂತಿದ್ದಾರೆ. ಹಾಗಾಗಿ ನಾವು ಬರೀ ಉಗ್ರರ ಜತೆ ಮಾತ್ರವಲ್ಲದೆ ಆಂತರಿಕವಾಗಿರುವ ಸ್ಥಳೀಯರ ಮೇಲೂ ಸಮರ ಸಾರಬೇಕಿದೆ. ಈ ಸ್ಥಳೀಯರೇ ಹಲವು ಸಂದರ್ಭಗಳಲ್ಲಿ ಪೊಲೀಸರು, ಬಿಎಸ್ಎಫ್ ಪಡೆ ಸೇರಿದಂತೆ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ ಹಲವರನ್ನು ಗಾಯಗೊಳಿಸಿದ್ದಾರೆ. ಈ ರೀತಿ ನಮ್ಮ ವಿರುದ್ಧ ಹಿಂಸಾಚಾರಕ್ಕಿಳಿಯುವ ಮೂಲಕ ಉಗ್ರರ ರಕ್ಷಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.

ಸೇನೆ ಕಾರ್ಯಾಚರಣೆಗಿಳಿದರೆ ಮಾನವಹಕ್ಕುಗಳ ಉಲ್ಲಂಘನೆ ಎನ್ನಲಾಗುತ್ತಿದೆ. ಹಿಂದೆ ಸರಿದರೆ ಸ್ಥಳೀಯರು ನಮ್ಮ ಮೇಲೆ ದಾಳಿಗಿಳಿಯುತ್ತಾರೆ. ಇದು ಬಿಕ್ಕಟ್ಟಿನ ಪರಿಸ್ಥಿತಿ ಉಂಟು ಮಾಡಿದೆ ಎನ್ನುತ್ತಾರೆ ಸೇನಾ ಅಧಿಕಾರಿಯೊಬ್ಬರು. ಇತ್ತೀಚೆಗೆ ಭಯೋತ್ಪಾದಕರ ವಿರುದ್ಧ ಹೋರಾಟವೇ ದೊಡ್ಡ ಸವಾಲಾಗಿದೆ. ಸ್ಥಳೀಯರಿಂದ ಉಗ್ರರಿಗೆ ಸಂಪೂರ್ಣ ರಕ್ಷಣೆ, ನೆರವು, ಬೆಂಬಲ ದೊರೆಯುತ್ತಿದೆ. ಪೊಲೀಸರು ಒಂದು ಸಣ ತಪ್ಪು ಮಾಡಿದರೂ ಸ್ಥಳೀಯರ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯ ಸ್ಥಳೀಯರು ಈಗ ಭಯೋತ್ಪಾದಕತೆಯತ್ತಲೇ ಒಲವು ಹೊಂದಿದ್ದು , ಭದ್ರತಾ ಪಡೆಗಳ ವಿರುದ್ದವೇ ತಿರುಗಿ ಬೀಳೂತ್ತಿದ್ದಾರೆ ಎಂಬುದು ಅಧಿಕಾರಿಗಳ ಅಳಲಾಗಿದೆ.

Write A Comment