ರಾಷ್ಟ್ರೀಯ

ಭಾರೀ ಭ್ರಷ್ಟಾಚಾರ: ಸಿಬಿಐನಿಂದ ಹಣಸಹಿತ ಪೊಲೀಸ್ ಅಧಿಕಾರಿ ಬಂಧನ

Pinterest LinkedIn Tumblr

arreನವದೆಹಲಿ,ಮೇ2-ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ. ತಾನು ಜಂಟಿ ಕಾರ್ಯದರ್ಶಿ ಎಂದು ಪೋಸು ಕೊಟ್ಟು ಜನರನ್ನು ವಂಚಿಸುತ್ತಿದ್ದ ಆರೋಪದಲ್ಲಿ ಇಲ್ಲಿನ ಜನಕ್‍ಪುರಿ ಠಾಣೆಯ ಅಧಿಕಾರಿ ರೆಹರ್‍ಸಿಂಗ್ ಮತ್ತು ಅಶುತೋಷ್ ಸಿಂಗ್ ಇಬ್ಬರನ್ನು ಬಂಧಿಸಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.

ಎಸ್‍ಪಿ ರೆಹರ್ ಸಿಂಗ್ ಜೊತೆಗೂಡಿ ಅಶುತೋಷ್ ಸಿಂಗ್ ಜನರನ್ನು ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದರು. ನಂತರ ಆ ಹಣವನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು.

ಈ ಇಬ್ಬರನ್ನು ಇಂದು ಮುಂಜಾನೆ ಮೂರು ಲಕ್ಷ ರೂ, ಸುಲಿಗೆ ಹಣದ ಸಮೇತ ಬಂಧಿಸಲಾಗಿದೆ ಎಂದು ಹೇಳಿರುವ ಸಿಬಿಐ, ಅಶುತೋಷ್‍ನಿಂದ ಒಂದು ಬೀಕಾನ್ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ದೆಹಲಿ ಪೊಲೀಸರ ಲಂಚಗುಳಿತನಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ.

Write A Comment