ರಾಷ್ಟ್ರೀಯ

ಆರ್‌ಎಸ್‌ಎಸ್ ಹಿರಿಯ ನಾಯಕ ಬಲರಾಜ್ ಮಧೋಕ್ ವಿಧಿವಶ

Pinterest LinkedIn Tumblr

Balraj-Madhok

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಹಿರಿಯ ನಾಯಕ ಮತ್ತು ಭಾರತೀಯ ಜನ ಸಂಘ (ಬಿಜೆಎಸ್)ದ ಮಾಜಿ ಅಧ್ಯಕ್ಷ ಬಲರಾಜ್ ಮಧೋಕ್ ನಿಧನರಾಗಿದ್ದಾರೆ.

96 ವರ್ಷದ ಬಲರಾಜ್ ಮಧೋಕ್ ಅವರು ಬೆಳಗ್ಗೆ 9 ಗಂಟೆಗೆ ದೆಹಲಿಯ ನ್ಯೂ ರಾಜೇಂದ್ರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಆರ್‌ಎಸ್‌ಎಸ್ ವಕ್ತಾರರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸ್ಕರ್ದು ಪ್ರಾಂತ್ರ್ಯದಲ್ಲಿ ಬಲರಾಜ್ ಅವರು 1920 ಫೆಬ್ರವರಿ 25 ರಂದು ಜನಿಸಿದ್ದರು. ಆರ್​ಎಸ್​ಎಸ್​ನ ಸಕ್ರಿಯ ಕಾರ್ಯಕರ್ತರಾಗಿದ್ದ ಬಲರಾಜ್ ಅವರು 1951ರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯನ್ನು ಪ್ರಾರಂಭಿಸಿದ್ದರು.

ರಾಷ್ಟ್ರ ಮತ್ತು ಸಮಾಜ ಉದ್ಧಾರಕ್ಕೆ ಶ್ರಮಿಸಿದ ಧೀಮಂತ ವ್ಯಕ್ತಿ: ಪ್ರಧಾನಿ ಮೋದಿ
ಆರ್ಎಸ್ಎಸ್ ಹಿರಿಯ ನಾಯಕ ಬಾಲರಾಜ್ ಮುಧೋಕ್ ಉತ್ತಮ ಆದರ್ಶವಾದಿ. ರಾಷ್ಟ್ರ ಮತ್ತು ಸಮಾಜ ಉದ್ಧಾರಕ್ಕಾಗಿ ಶ್ರಮಿಸಿದ ಧೀಮಂತ ವ್ಯಕ್ತಿ. ಸೈದ್ಧಾಂತಿಕ ಬದ್ಥತೆಯ ಬಲವಾದ ಚಿಂತನೆಯನ್ನು ಹೊಂದಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Write A Comment