ರಾಷ್ಟ್ರೀಯ

ಫ್ರೀಡಂ 251: ಮೇ ತಿಂಗಳಲ್ಲಿ ಗ್ರಾಹಕರಿಗೆ ಸ್ಮಾರ್ಟ್‌ಫೋನ್ ವಿತರಣೆ

Pinterest LinkedIn Tumblr

11ನವದೆಹಲಿ: ವಿಶ್ವದಲ್ಲೇ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಭಾರಿ ಸುದ್ದಿ ಮಾಡಿದ್ದ ರಿಂಗಿಂಗ್ ಬೆಲ್ಸ್ ಸಂಸ್ಥೆ, ಸ್ಮಾರ್ಟ್‌ಪೋನ್‌ ಮಾರುಕಟ್ಟೆಯಲ್ಲಿ ಸಾಕಷ್ಟು ವಿವಾದದ ಜೊತೆಗೆ ಹೊಸ ಸಂಚಲವನ್ನು ಮೂಡಿಸಿತ್ತು.

ಮಾಧ್ಯಮಗಳ ಹೊಸ ವರದಿಯ ಪ್ರಕಾರ, ಫ್ರೀಡಂ 251 ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ರಿಂಗಿಂಗ್ ಬೆಲ್ಸ್, ಮೊದಲನೆಯ ಬ್ಯಾಚ್‌ನ ಗ್ರಾಹಕರಿಗೆ ಸ್ಮಾರ್ಟ್‌ಪೋನ್ ನೀಡುವುದಾಗಿ ಭರವಸೆ ನೀಡಿದೆ.

ಟೆಕ್ನಾಲಾಜಿ ವೆಬ್‌ಸೈಟ್ ಟೆಕ್‌ರಡಾರ್ ವರದಿಯ ಪ್ರಕಾರ, ಫ್ರೀಡಂ 251 ಸ್ಮಾರ್ಟ್‌ಪೋನ್‌ಗಳನ್ನು ಹಣ ಪಾವತಿ ಮಾಡುವ ಮೂಲಕ ಬುಕ್ ಮಾಡಿರುವ ಮೊದಲ 30 ಸಾವಿರ ಗ್ರಾಹಕರಿಗೆ ರಿಂಗಿಂಗ್ ಬೆಲ್ಸ್ ಸಂಸ್ಥೆ ಮೊಬೈಲ್ ಪೋನ್‌ಗಳನ್ನು ನೀಡಲಿದೆ ಎಂದು ವರದಿ ಮಾಡಿದೆ.

ರಿಂಗಿಂಗ್ ಬೆಲ್ಸ್ ಸಂಸ್ಥೆ, ಮೇ ತಿಂಗಳಲ್ಲಿ ಗ್ರಾಹಕರಿಗೆ ಸ್ಮಾರ್ಟ್‌ಪೋನ್ ತಲುಪಿಸಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ಸಾಲಿನ ಫೆಬ್ರುವರಿ ತಿಂಗಳಲ್ಲಿ ರಿಂಗಿಂಗ್ ಬೆಲ್ಸ್ ಸಂಸ್ಥೆ, ವಿಶ್ವದಲ್ಲೇ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಭಾರಿ ಸುದ್ದಿ ಮಾಡಿದ್ದು, ಗ್ರಾಹಕರು ಸಹ ಕಡಿಮೆ ಬೆಲೆಯ ಸ್ಮಾರ್ಟ್‌ಪೋನ್‌ ಕೊಳ್ಳಲು ಮುಗಿ ಬಿದ್ದಿದ್ದರು.

ನಾವು ಮತ್ತೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ಇದೀಗ ಸ್ಮಾರ್ಟ್‌ಪೋನ್ ಬುಕಿಂಗ್ ಮುಕ್ತಾಯಗೊಂಡಿದೆ ಎಂದು ತೊರಿಸುತ್ತಿದೆ. ಸಂಸ್ಥೆ ಇ-ಮೇಲ್‌ಗಳನ್ನು ಕಂಪೈಲ್ ಮಾಡುತ್ತಿದ್ದು, ಮೊದಲು ಸ್ಮಾರ್ಟ್‌ಪೋನ್ ಬುಕ್ ಮಾಡಿರುವ 25 ಲಕ್ಷ ಗ್ರಾಹಕರಿಗೆ, ಶೀಘ್ರದಲ್ಲಿ ಪೋನ್‌ ತಲುಪಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.

888 ರೂಪಾಯಿಗಳಲ್ಲಿ ಡೊಕೊಸ್ಸ್ ಎಕ್ಸ್-1 ಸ್ಮಾರ್ಟ್‌ಪೋನ್ ನೀಡುವುದಾಗಿ ಭರವಸೆ ನೀಡಿರುವ ಜೈಪುರ್ ಮೂಲದ ಡೊಕೊಸ್ಸ್ ಸಂಸ್ಥೆ ರಿಂಗಿಂಗ್ ಬೆಲ್ಸ್ ಸಂಸ್ಥೆಗೆ ತೀವ್ರ ಪೈಪೋಟಿ ನೀಡುತ್ತಿದೆ. ನಿನ್ನೆ ಡೊಕೊಸ್ಸ್ ಎಕ್ಸ್-1 ಆವೃತ್ತಿಯ ಪೋನ್‌ಗಳು ಅನಾವರಣಗೊಂಡಿದ್ದು, ಈ ಪೋನ್‌ಗಳು ಮೇ 2 ರಂದು ಬಿಡುಗಡೆ ಹೊಂದುತ್ತಿವೆ.

Write A Comment