ರಾಷ್ಟ್ರೀಯ

ಹರಿಯಾಣ ಜಾತಿ-ಗಲಭೆಯ ಹಿಂದೆ ಬಿಜೆಪಿ ಕೈವಾಡ: ರಾಹುಲ್ ಆರೋಪ

Pinterest LinkedIn Tumblr

rahul13ನವದೆಹಲಿ: ಇತ್ತೀಚಿಗೆ ಹರಿಯಾಣದಲ್ಲಿ ಜಾಟ್ ಮೀಸಲಾತಿ ಪ್ರತಿಭಟನೆ ವೇಳೆ ನಡೆದ ಗಲಭೆಯ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಆರೋಪಿಸಿದ್ದಾರೆ.
ಹರಿಯಾಣದಲ್ಲಿ ನಡೆದ ಗಲಭೆ ಪೂರ್ವನಿಯೋಜಿತ ಜಾತಿ ಘರ್ಷಣೆಯಾಗಿದ್ದು, ಇದು ಬಿಜೆಪಿಯವರ ರಾಜಕೀಯ ಆಟ ಎಂದು ರಾಹುಲ್ ಗಾಂಧಿ ಹಿಂದುಸ್ಥಾನ್ ಟೈಮ್ಸ್ ನೀಡಿದ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, 2002ರಲ್ಲಿ ಗುಜರಾತ್​ನಲ್ಲಿ ನಡೆದ ಮಾದರಿಯಲ್ಲೇ ಈ ಗಲಭೆ ನಡೆದಿದೆ. ಇದು ಬಿಜೆಪಿಯ ಪೂರ್ವ ನಿಯೋಜಿತ ಕೃತ್ಯ ಎಂದು ಹೇಳಲಿಕ್ಕೆ ಇದಕ್ಕಿಂತ ಸಾಕ್ಷಿ ಇನ್ನೊಂದು ಬೇಕಾಗಿಲ್ಲ ಎಂದಿದ್ದಾರೆ.
2002ರ ಗಲಭೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರೇ ಗುಜರಾತ್ ನ ಸಿಎಂ ಆಗಿದ್ದರು. ಜಾತಿ, ಸಮುದಾಯದ ಹೆಸರಿನಲ್ಲಿ ಜನರನ್ನು ಒಡೆದು ಆಳುವ ಪ್ರವೃತ್ತಿಯನ್ನು ಬಿಜೆಪಿ ಬೆಳೆಸಿಕೊಂಡಿದೆ. ತುಘಲಕ್ ಮಾರ್ಗ ಅನುಸರಿಸುತ್ತಿದೆ. ಬಿಜೆಪಿ ಗಲಭೆ ನಡೆಸಲು ಸಿದ್ಧತೆ ಮಾಡಿಕೊಂಡಿತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ ಎಂದಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ 18 ತಿಂಗಳಲ್ಲಿ ಹರಿಯಾಣ ಹೊತ್ತಿ ಉರಿದಿದೆ. ಇದಕ್ಕೆ ಬಿಜೆಪಿ ನಾಯಕರ ಒಡೆದು ಆಳುವ ನೀತಿಯಯ ಕಾರಣ ಎಂದಿರುವ ರಾಹುಲ್ ಗಾಂಧಿ, ಗಲಭೆ ವೇಳೆ ಜನರ ಬಳಿ ಬಂದು ಪರಿಸ್ಥಿತಿಯ ಬಗ್ಗೆ ಮಾತನಾಡುವ ಹಂಬಲವಿತ್ತು. ಆದರೆ ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ಬರಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.

Write A Comment