ರಾಷ್ಟ್ರೀಯ

ಪಶ್ಚಿಮ ಬಂಗಾಳದಲ್ಲಿ ಶೇ.79.19 ರಷ್ಟು ಮತದಾನ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿಪಿಐ ನಾಯಕರ ಮತಚಲಾವಣೆ

Pinterest LinkedIn Tumblr

election-2ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆಗೆ 5 ನೇ ಹಂತದ ಮತದಾನ ಮುಕ್ತಾಯಗೊಂಡಿದ್ದು ಶೇ.72.19 ರಷ್ಟು ಮತದಾನ ನಡೆದಿದೆ.
ಬಂಗಾಳದಲ್ಲಿ ಕಾಂಗ್ರೆಸ್- ಸಿಪಿಐ(ಎಂ) ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, 5 ನೇ ಹಂತದ ಮತದಾನದಲ್ಲಿ ಕಮ್ಯುನಿಷ್ಟ್ ಪಕ್ಷದ ನಾಯಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾವಣೆ ಮಾಡಿದ್ದಾರೆ. ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗು ಕಮ್ಯುನಿಷ್ಟ್ ಪಕ್ಷದ ನಾಯಕ ಬುದ್ಧದೇವ್ ಭಟ್ಟಾಚಾರ್ಯ, ದಕ್ಷಿಣ ಕೋಲ್ಕತಾದ ಬ್ಯಾಲಿಗಂಜ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ದೇವ್ ನಾಥ್ ಪರ ಮತ ಚಲಾವಣೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಬಂಗಾಳದಲ್ಲಿ ಕಾಂಗ್ರೆಸ್- ಸಿಪಿಐ(ಎಂ) ಅಧಿಕಾರಕ್ಕೆ ಬರಲಿದೆ ಎಂದು ಸಿಪಿಐ(ಎಂ) ನ ನಾಯಕ ಮೊಹಮ್ಮದ್ ಸಲೀಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Write A Comment