ರಾಷ್ಟ್ರೀಯ

ಪತ್ನಿಯನ್ನೇ ಅತ್ಯಾಚಾರವೆಸಗಿ ಬಸಿರು ಮಾಡುವಂತೆ ಗೆಳೆಯನಿಗೆ ಹೇಳಿದ ‘ನಿರ್ವೀರ್ಯ’ ಪತಿ! ಮುಂದೆ ಏನಾಯಿತು ….ಇಲ್ಲಿದೆ ಓದಿ…

Pinterest LinkedIn Tumblr

3rapepe

ಕೋಝಿಕ್ಕೋಡ್: ನಿರ್ವೀರ್ಯ ಪತಿಯೊಬ್ಬ ತನ್ನ ಪತ್ನಿಯನ್ನು ಅತ್ಯಾಚಾರವೆಸಗಿ ಬಸಿರು ಮಾಡುವಂತೆ ಗೆಳೆಯನಿಗೆ ಹೇಳಿದ ವಿಚಿತ್ರ ಘಟನೆಯೊಂದು ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಡೆದಿದೆ.

ಕಳೆದ ಎರಡು ವರ್ಷಗಳಿಂದ ಈ ದಂಪತಿಯರು ಮಗುವಿಗಾಗಿ ಹಂಬಲಿಸುತ್ತಿದ್ದರು. ಇಲ್ಲಿನ ಇರಾಣಿಪಾಲಂನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಬಂಜೆತನ ಚಿಕಿತ್ಸೆ ನಡೆಸಿದಾಗ 30 ಹರೆಯದ ಪತಿ ನಿರ್ವೀರ್ಯ ಎಂಬುದು ತಿಳಿದು ಬಂದಿದೆ.

ಇದಾದ ನಂತರ ಆತ ತನ್ನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸುವಂತೆ ಗೆಳೆಯ ಸಿದ್ದಿಖ್ ಎಂಬಾತನಿಗೆ ಹೇಳಿದ್ದಾನೆ. ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿಯನ್ನಾಗಿ ಮಾಡು ಎಂದು ಗೆಳೆಯನಿಗೆ ಆಫರ್ ನೀಡಲಾಗಿತ್ತು.

ಗೆಳೆಯನ ಇಚ್ಛೆಯಂತೆ ಸಿದ್ದಿಖ್, ಗೆಳೆಯನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ಒಪ್ಪಿ ಆಕೆಯ ಮನವೊಲಿಸಲು ನೋಡಿದ್ದಾನೆ. ಇದನ್ನು ಆಕೆ ಪ್ರತಿಭಟಿಸಿದಾಗ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಸಿದ್ದಿಖ್‌ನ ಕೈಯಿಂದ ತಪ್ಪಿಸಲು ಆಕೆ ಯತ್ನಿಸಿದಾಗ ಆಕೆಯ ಪತಿಯೇ ಆಕೆಯನ್ನು ಅಡ್ಡಗಡ್ಡಿ ಸಿದ್ದಿಖ್‌ನ ತೆಕ್ಕೆಗೆ ದೂಡಿದ್ದಾನೆ. ಸಿದ್ದಿಖ್, ತನ್ನ ಗೆಳೆಯನ ಪತ್ನಿಯನ್ನು ಗೆಳೆಯನ ಕಣ್ಮುಂದೆಯೇ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆಯ ನಂತರ ಪತಿಯೊಂದಿಗೆ ಜಗಳ ಮಾಡಿ ಅತ್ಯಾಚಾರಕ್ಕೊಳಗಾದ ಹೆಣ್ಮಗಳು ತವರು ಮನೆಗೆ ಹೋಗಿದ್ದಾಳೆ. ಅಲ್ಲಿ ಆಕೆಯ ಕುಟುಂಬದವರಲ್ಲಿ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದು, ಗುರುವಾರ ನಡಕ್ಕಾವ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು.

ಈ ಇಬ್ಬರು ಗಂಡಸರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇವರಿಬ್ಬರ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Write A Comment