ರಾಷ್ಟ್ರೀಯ

ಅಶ್ಲೀಲ ಚಿತ್ರಗಳ ಬಳಕೆಗೆ ಸುಪ್ರೀಂ ಗರಂ

Pinterest LinkedIn Tumblr

dfdfghನವದೆಹಲಿ (ಏಜೆನ್ಸಿಸ್‌): ನಿರೋಧ್‌ ಪಾಕೇಟ್‌ ಹಾಗೂ ಕಾಮೋದ್ರೇಕ ಉತ್ಪನ್ನಗಳ ಮೇಲೆ ಅಶ್ಲೀಲ ಚಿತ್ರಗಳನ್ನು ಮುದ್ರಿಸುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್‌ ಅವರು ಸರ್ಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮಣಿಂದರ್‌ ಸಿಂಗ್‌ ಅವರಿಗೆ ಅಶ್ಲೀಲ ಚಿತ್ರಗಳ ಪ್ರಕಟಣೆ ಕುರಿತಂತೆ ಮಾಹಿತಿ ನೀಡುವಂತೆ ನೋಟಿಸ್‌ ಜಾರಿ ಮಾಡಿದರು.

ನಿರೋಧ್‌ ಅಥವಾ ಲೈಂಗಿಕತೆಯನ್ನು ಉದ್ರೇಕಿಸುವಂತಹ ಉತ್ಪನ್ನಗಳ ಮೇಲೆ ಅಶ್ಲೀಲ ಚಿತ್ರಗಳನ್ನು ಪ್ರಕಟಿಸುವುದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಇಂತಹ ಚಿತ್ರಗಳನ್ನು ಪ್ರಕಟಿಸುವ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.

Write A Comment