ರಾಷ್ಟ್ರೀಯ

ಎಫ್‌ಐಸಿಸಿಐ ಕಟ್ಟಡದಲ್ಲಿ ಅಗ್ನಿ ಅವಘಡ; ಇಬ್ಬರ ಸ್ಥಿತಿ ಗಂಭೀರ

Pinterest LinkedIn Tumblr

fire

ನವದೆಹಲಿ: ಇಲ್ಲಿನ ಮಂಡಿ ಹೌಸ್‌ನಲ್ಲಿರುವ ಎಫ್‌ಐಸಿಸಿಐ ಕಟ್ಟಡದಲ್ಲಿ ಸೋಮವಾರ ರಾತ್ರಿ 1.45 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ.

ಈ ಅಗ್ನಿ ಅವಘಡದಲ್ಲಿ ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿಗಳಿಗೆ ತೀವ್ರ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಫ್‌ಐಸಿಸಿಆ ಕಟ್ಟಡದ ಜೀರ್ಣೋದ್ಧಾರ ಕಾರ್ಯಗಳು ನಡೆದು ಬರುತ್ತಿದ್ದು ಮೊದಲು ಮೇಲ್ಮಹಡಿಯಲ್ಲಿರುವ ಅಡಿಟೋರಿಯಂಗೆ ಬೆಂಕಿ ಹತ್ತಿಕೊಂಡಿತ್ತು. ನಂತರ ಅದು ಎಲ್ಲೆಡೆ ಪಸರಿಸಿತ್ತು. ಬೆಂಕಿ ಅವಘಡ ಸಂಭವಿಸಿದಾಗ ಕಟ್ಟಡದಲ್ಲಿ ಅಷ್ಟೊಂದು ಜನ ಇರಲಿಲ್ಲ. ಮಾತ್ರವಲ್ಲ ಬೆಂಕಿ ಹಬ್ಬತ್ತಿದ್ದಂತೆ ಅಲ್ಲಿದ್ದ ಜನರನ್ನು ಸುರಕ್ಷಿತ ಸ್ಥಾನಗಳಿಗೆ ಕರೆದೊಯ್ಯಲಾಗಿತ್ತು.

ಆದಾಗ್ಯೂ, ಅಗ್ನಿ ಅವಘಡ ಸಂಭವಿಸಲು ಕಾರಣ ಏನೆಂದು ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Write A Comment