ರಾಷ್ಟ್ರೀಯ

ಸ್ಮೃತಿ ರುಂಡ ಹಿಡಿದು ಕಾಳಿಯಾದ ಮಾಯಾವತಿ; ಕಾಲಿನ ಕೆಳಗೆ ಭಾಗವತ್, ಕ್ಷಮೆಯಾಚಿಸುತ್ತಿರುವ ಮೋದಿ: ವಿವಾದದಲ್ಲಿ ಬಿಎಸ್’ಪಿ ಹೋರ್ಡಿಂಗ್ಸ್

Pinterest LinkedIn Tumblr

mayawati-kali

ಲಖನೌ: ಬಿಎಸ್ ಪಿ ನಾಯಕಿ ಮಾಯಾವತಿಯವರು ಹಿಂದೂ ದೇವತೆ ಕಾಳಿ ರೂಪದಲ್ಲಿರುವ ಬಿಎಸ್ ಪಿ ಹೋರ್ಡಿಂಗ್ಸ್ ವೊಂದು ಇದೀಗ ವಿವಾದವೊಂದಕ್ಕೆ ಕಾರಣವಾಗಿದೆ.

ಬಿಎಸ್ ಪಿ ಪ್ರದರ್ಶಿಸಿರುವ ಹೋರ್ಡಿಂಗ್ಸ್ ನಲ್ಲಿ ಮಾಯಾವತಿ ಕಾಳಿ ರೂಪದಲ್ಲಿದ್ದು, ಒಂದು ಕೈಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರ ರುಂಡವನ್ನು ಹಿಡಿದಿದ್ದಾರೆ. ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಸ್ ಸಿ, ಎಸ್ ಟಿ ಮೀಸಲಾತಿಯನ್ನು ತೆಗೆಯುವುದಿಲ್ಲ ಎಂದು ಹೇಳಿ ಕ್ಷಮೆ ಕೋರುತ್ತಿರುವುದು ಹೋರ್ಡ್ಸಿಂಗ್ಸ್ ನಲ್ಲಿ ಕಂಡುಬಂದಿದೆ.

ಇನ್ನು ಹೋರ್ಡಿಂಗ್ಸ್ ನಲ್ಲಿ ಮೋಹನ್ ಭಾಗವತ್ ಅವರು ಕೂಡ ಕಂಡುಬಂದಿದ್ದು, ಭಾಗವತ್ ಅವರನ್ನು ಮಾಯಾವತಿ ತುಳಿಯುತ್ತಿರುವಂತೆ ರೂಪದಲ್ಲಿ ಅಣಕಿಸುತ್ತಿರುವಂತೆ ಪ್ರದರ್ಶಿಸಲಾಗಿದೆ.

ಅವರು ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಈ ಹೋರ್ಡಿಂಗ್ಸ್ ನ್ನು ಹಾಕಿದ್ದು, ಹೋರ್ಡಿಂಗ್ಸ್ ನಲ್ಲಿ ಮೀಸಲಾತಿಯನ್ನು ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ. ಅಲ್ಲದೆ, ಎಸ್ ಪಿ ಕಾರ್ಯಕರ್ತ ಶಿಲ್ಪಿ ಹಾಗೂ ಕರದಮ್ ಅವರು ಈ ಹೋರ್ಡಿಂಗ್ಸ್ ನ್ನು ಪ್ರದರ್ಶಿಸಿದ್ದಾರೆಂದು ಹೇಳಲಾಗುತ್ತಿದೆ.

ಇನ್ನು ಹೋರ್ಡಿಂಗ್ಸ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ವಿಜಯ್ ಬಹದ್ದೂರ್ ಪಾಠಕ್ ಅವರು, ಇದೊಂದು ಗಂಭೀರ ಅಪರಾಧವಾಗಿದೆ. ಬಿಎಸ್ ಪಿ ಪಕ್ಷವು ಸಮಾಜದಲ್ಲಿ ಕೋಮುವಾದ ಸೃಷ್ಟಿಸುತ್ತಿದೆ. ಹೋರ್ಡಿಂಗ್ಸ್ ಕುರಿತು ಜಿಲ್ಲಾಡಳಿತದ ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Write A Comment