ರಾಷ್ಟ್ರೀಯ

1000 ವರ್ಷಗಳ ಸಂಪ್ರದಾಯ ಮುರಿದು ಮಹಿಳೆಯರಿಗೆ ಪ್ರವೇಶ ಕಲ್ಪಿಸಿದ ಕೇರಳದ ತಳದಂಞಾಡಿ ಜುಮಾ ಮಸೀದಿ

Pinterest LinkedIn Tumblr

kera

ಕೋಟ್ಟಯಂ: ಇದೇ ಮೊದಲ ಬಾರಿಗೆ 1000 ವರ್ಷಗಳ ಹಳೆಯ ಸಂಪ್ರದಾಯವನ್ನು ಮುರಿದು ತಳದಂಞಾಡಿ ಜುಮಾ ಮಸೀದಿ, ಮಹಿಳೆಯರಿಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಿದೆ.

ಪ್ರಸ್ತುತ ಮಸೀದಿಯಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕೆಂದು ಹೋರಾಟ ನಡೆದಿದ್ದು, ಈ ಹಿನ್ನೆಲೆಯಲ್ಲಿ ಮಸೀದಿಯ ಸಮಿತಿ ಈ ಮಹತ್ತರ ತೀರ್ಮಾನ ಕೈಗೊಂಡಿದೆ.

1000 ವರ್ಷಗಳಿಂದ ಮಸೀದಿಯ ಒಳಗೆ ಮಹಿಳೆಯರ ಪ್ರವೇಶ ನಿಷಿದ್ಧವಾಗಿತ್ತು. ಕೇರಳದ ಕೋಟ್ಟಯಂ ಜಿಲ್ಲೆಯಲ್ಲಿರುವ ತಳದಂಞಾಡಿ ಜುಮಾ ಮಸೀದಿ ಭಾರತದಲ್ಲಿರುವ ಅತೀ ಪುರಾತನವಾದ ಮಸೀದಿಗಳಲ್ಲೊಂದಾಗಿದೆ.

Write A Comment