ರಾಷ್ಟ್ರೀಯ

ದೇಶದೆಲ್ಲೆಡೆ ಭೀಕರ ಬರಗಾಲ: ನೀರು ಸಂರಕ್ಷಿಸುವಂತೆ ಪ್ರಧಾನಿ ಮೋದಿ ಕರೆ

Pinterest LinkedIn Tumblr

mann-ki-baat

ನವದೆಹಲಿ: ದೇಶದೆಲ್ಲೆಡೆ ಭೀಕರ ಬರಗಾಲ ಸಂಭವಿಸಿದ್ದು, ವ್ಯರ್ಥ ಮಾಡಲೆ ಪ್ರತೀ ಹನಿ ನೀರನ್ನು ಸಂರಕ್ಷಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಕರೆ ನೀಡಿದ್ದಾರೆ.

19ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ದೇಶದಲ್ಲೆಡೆ ಕುಡಿಯುವ ನೀರಿಗೆ ಅಭಾವ ಹೆಚ್ಚಾಗಿದೆ. ಹೀಗಾಗಿ ನೀರನ್ನು ವ್ಯರ್ಥ ಮಾಡದೆ, ಪ್ರತೀ ಹನಿ ನೀರನ್ನು ಸಂರಕ್ಷಿಸಿ. ನೀರಿನ ಸಮಸ್ಯೆ ನಿವಾರಿಸಲು ಮಳೆ ನೀರು ಕೊಯ್ಲನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ನೀರಿನ ಸಮಸ್ಯೆ ಪರಿಹಾರಕ್ಕಾಗಿ ಪ್ರತಿ ಹಳ್ಳಿಗಳಲ್ಲೂ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಎಂದರು. ಅಲ್ಲದೆ, ಇದೇ ವೇಳೆ ಗುಜರಾತ್ ನ ಅಹ್ಮದ್ ನಗರದಲ್ಲಿ ರೈತರು ನೀರಿಗಾಗಿ ಅಳವಡಿಸಿಕೊಂಡಿರುವ ಮಳೆ ನೀರು ಕೊಯ್ಲು ಪದ್ಧತಿಯನ್ನು ಪ್ರಸ್ತಾಪಿಸಿರುವ ಅವರು, ಇಲ್ಲಿನ ರೈತರು ಬೇಸಿಗೆ ಕಾಲವನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆಯೇ ನೀರನ್ನು ಸಂರಕ್ಷಿಸುವ ಸಲುವಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅನುಸರಿಸುತ್ತಿದ್ದರು. ಅಲ್ಲಿನ ರೈತರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಬಾರಿ ಮಾನ್ಸೂನ್ ಮಳೆ ಶೇ.106-110ರಷ್ಟು ಆಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಇದು ಕೊಂಚ ನಿರಾಳ ತಂದರೂ ಮತ್ತೆ ಮುಂಬರುವ ದಿನಗಳ ಬಗ್ಗೆ ಚಿಂತಸಬೇಕು. ಮೊದಲೇ ನೀರಿನ ಸಂರಕ್ಷಣೆಯಲ್ಲಿ ಎಚ್ಚರವಹಿಸಬೇಕಾದ ಅವಶ್ಯಕತೆಯಿದೆ. ನೀರು ಸಂರಕ್ಷಣೆಯಲ್ಲಿ ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಗಳನ್ನು ನಾವು ಮಾಡಬೇಕು. ಪ್ರತೀ ಹನಿ ನೀರನ್ನು ಸಂರಕ್ಷಿಬೇಕು.

ಮಾನ್ಸೂನ್ ಮಳೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಮಳೆ ಹೆಚ್ಚಾಗುತ್ತದೆ, ನೀರಿನ ಶುದ್ಧೀಕರಣದ ಕೆಲಸ ಹೆಚ್ಚಾಗುತ್ತದೆ. ಗಂಗಾ ನದಿ ಅತ್ಯಗತ್ಯವಾಗಿರುವ ನೀರಿನ ಸಂಪನ್ಮೂಲ. ಗಂಗಾ ನದಿಯ ಸ್ವಚ್ಛತಾ ಕಾರ್ಯ ಮುಂದುವರೆಯುತ್ತಿದೆ. ಗಂಗಾ ಸ್ವಚ್ಛತೆಗೆ ಇದೀಗ ಗುತ್ತಿಗೆದಾರರನ್ನು ಬದಲಿಸಲು ಚಿಂತನೆ ನಡೆಸಲಾಗುತ್ತಿದೆ. ಸರ್ಕಾರ ಗಂಗೆಯನ್ನು ಸ್ವಚ್ಛ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಗಂಗಾ ಸ್ವಚ್ಛತೆಗಾಗಿ ಎಲ್ಲರೂ ಕೈ ಜೋಡಿಸಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.

ಏ.14 ರಂದು ದೇಶದ ಜನತೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ದಿನಾಚರಣೆಯನ್ನು ಆಚರಿಸಿತು. ಇಂದು ಪಂಚಾಯಿತಿ ದಿನವನ್ನು ಆಚರಿಸುತ್ತಿದೆ. ಹಳ್ಳಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ತಲುಪಲು ಪಂಚಾಯಿತಿ ರಾಜ್ ಸಹಾಯಕವಾಗುತ್ತದೆ.

ನಂತರ ಎಲ್ ಪಿಜಿ ಸಬ್ಸಿಡಿ ಕುರಿತಂತೆ ಪ್ರಸ್ತಾಪ ಮಾಡಿದ ಅವರು, ಎಲ್ ಪಿಜಿ ಸಬ್ಸಿಡಿಯನ್ನು 1 ಕೋಟಿ ಜನ ಹಿಂದಕ್ಕೆ ನೀಡಿದ್ದಾರೆ. ಇದರಲ್ಲಿ ಮಧ್ಯಮವರ್ಗದ ಜನರೂ ಕೂಡ ಸಬ್ಸಿಡಿಯನ್ನು ಹಿಂದಕ್ಕೆ ನೀಡಿದ್ದಾರೆ. ಸಾಕಷ್ಟು ಹೆಮ್ಮೆಯಿದೆ. ಜನತೆಗೆ ಧನ್ಯಾವಾದ ಹೇಳಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ.

ಪ್ರವಾಸ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ಸಿಂಹಾಸ್ತ್ ಕುಂಭ ಮೇಳದ ಫೋಟೋಗಳನ್ನು ಸಾಕಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಇಂತದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರೋತ್ಸಾಹಿಸಬೇಕು. ಮತ್ತಷ್ಟು ಜನರು ಕುಂಭ ಮೇಳದ ಬಗ್ಗೆ ತಿಳಿದುಕೊಳ್ಳುವಂತೆ ಮಾಡಬೇಕು. ಇದಕ್ಕಾಗಿ ಸರ್ಕಾರ ಫೋಟೋ ಸ್ಪರ್ಧೆಯನ್ನು ಏರ್ಪಡಿಸಬೇಕು. ನಮ್ಮ ವೈಶಿಷ್ಟ್ಯದ ಬಗ್ಗೆ ತಿಳಿಸಬೇಕು.

ಕುಂಭ ಮೇಳೆದ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರು ನನ್ನ ಬಳಿ ಮಾತನಾಡಿದ್ದರು. ಸಿಂಹಾಸ್ತ ಕುಂಭ ಮೇಳದಲ್ಲಿ ಸ್ವಚ್ಛತೆ ಕುರಿತು ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ಹೇಳಿದ್ದರು ಎಂದು ಹೇಳಿದ್ದಾರೆ.

ಗುಣಮಟ್ಟದ ಶಿಕ್ಷಣದ ಬಗ್ಗೆ ಹರಿಸಿ
ಸರ್ಕಾರ ಗುಣಮಟ್ಟದ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು. ಶಿಕ್ಷಣವನ್ನು ಅಭಿವೃದ್ಧಿಪಡಿಸುವತ್ತ ಪ್ರತೀಯೊಂದು ಸರ್ಕಾರ ತಮ್ಮ ಸ್ವಂತ ದಾರಿಯಲ್ಲಿ ಗಮನ ಹರಿಸುವ ಅಗತ್ಯವಿದೆ. ಪ್ರಸ್ತುತ ಸರ್ಕಾರ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವತ್ತ ಗಮನ ಹಸಿರುತ್ತಿದೆ. ಇದೀಗ ನಮ್ಮ ಗಮನವನ್ನು ಬದಲಿಸುವ ಸಮಯ ಬಂದಿದೆ. ಸರ್ಕಾರ ಇದೀಗ ಗುಣಮಟ್ಟದ ಶಿಕ್ಷಣದತ್ತ ಗಮನ ಹರಿಸಬೇಕು. ಶಾಲೆಗಳನ್ನು ಹೆಚ್ಚಿಸುವ ಬದಲು ಕಲಿಕೆ ಗುಣಮಟ್ಟವನ್ನು ಹೆಚ್ಚಿಸಬೇಕೆಂದು ಹೇಳಿದ್ದಾರೆ.

Write A Comment