ರಾಷ್ಟ್ರೀಯ

ಬ್ಯಾಂಕ್ ಗಳ ಸಾಲದ ಪೈಕಿ ವಿಜಯ್ ಮಲ್ಯ 6 ಸಾವಿರ ಕೋಟಿ ರೂ. ಹಿಂದಿರುಗಿಸಲಿದ್ದಾರಂತೆ !

Pinterest LinkedIn Tumblr

vijay-mallya

ನವದೆಹಲಿ: ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಿಂದ ಕಂಗಾಲಾಗಿರುವ ಉದ್ಯಮಿ ವಿಜಯ್ ಮಲ್ಯ, ಬ್ಯಾಂಕ್ ಗಳಿಗೆನ ಪಾವತಿ ಮಾಡಬೇಕಿರುವ ಒಟ್ಟು 9 ಸಾವಿರ ಕೋಟಿ ಪೈಕಿ 6 ಸಾವಿರ ಕೋಟಿ ಹಿಂತಿರುಗಿಸುವುದಾಗಿ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಕಳೆದ ಬಾರಿ ವಿಜಯ್ ಮಲ್ಯ 4 ಸಾವಿರ ರೂಗಳನ್ನು ಪಾವತಿ ಮಾಡಲು ಸಿದ್ಧ ಎಂಬ ಮಾಹಿತಿ ನೀಡಲಾಗಿತ್ತು. ಈಗ ಬಂಧನ ವಾರೆಂಟ್ ಜಾರಿಯಾಗುತ್ತಿದ್ದಂತೆಯೇ ಬ್ಯಾಂಕ್ ಗಳಿಗೆ 6 ಸಾವಿರ ಕೋಟಿ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಗೆ ನೀಡಲಾಗಿರುವ ಮಾಹಿತಿಯಲ್ಲಿ ಭಾರತಕ್ಕೆ ಬರುವುದರ ಬಗ್ಗೆ ಮೌನ ವಹಿಸಿರುವ ವಿಜಯ್ ಮಲ್ಯ, 6 ಸಾವಿರ ಕೋಟಿ ತಾವು ಸದ್ಯದ ಸ್ಥಿತಿಯಲ್ಲಿ ಪಾವತಿಸಬಹುದಾದ ಮೊತ್ತ ಎಂದು ತಿಳಿಸಿದ್ದಾರೆ. ಇನ್ನು ಕಿಂಗ್ ಫಿಷರ್ ಏರ್ ಲೈನ್ಸ್ ಉದ್ಯಮ ನೆಲಕಚ್ಚುವುದಕ್ಕೆ ಅಧಿಕ ತೈಲ ಬೆಲೆ, ವಿಪರೀತವಾಗಿ ವಿಧಿಸಲಾಗುತ್ತಿದ್ದ ತೆರಿಗೆ, ದೋಷಯುಕ್ತ ವಿಮಾನ ಎಂಜಿನ್ ಗಳು ಕಾರಣವಾಯಿತು. ಇದರಿಂದಾಗಿ 6 ,107 ಕೋಟಿ ನಷ್ಟ ಉಂಟಾಯಿತು ಎಂದು ಹೇಳಿದ್ದಾರೆ.

ವಿಜಯ್ ಮಲ್ಯ 13 ಬ್ಯಾಂಕುಗಳಿಂದ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡಲು 4 ಸಾವಿರ ಕೋಟಿ ರೂ ಪಾವತಿ ಮಾಡಲು ಸಿದ್ಧರಿದ್ದಾರೆ ಎಂದು ಮಾ.30 ರಂದು ಅವರ ಪರ ವಕೀಲರು ಸುಪ್ರೀಂ ಗೆ ಮಾಹಿತಿ ನೀಡಿದ್ದರು. ಬಹುರಾಷ್ಟ್ರೀಯ ಸಂಸ್ಥೆ ಜನರಲ್ ಎಲೆಕ್ಟ್ರಿಕ್ ವಿರುದ್ಧ ವಿಜಯ್ ಮಲ್ಯ ದ್ಯಾವೆ ಹೂಡಿದ್ದು ಆ ಪ್ರಕರಣದಲ್ಲಿ ಜಯಗಳಿಸಿದರೆ ಅಲ್ಲಿಂದ ಸಿಗುವ ಸಾಧ್ಯತೆಯಿರುವ ೨೦೦೦ ಕೋಟಿ ರೂ ಮೊತ್ತವನ್ನು ಸೇರಿಸಿ 6 ಸಾವಿರ ಕೋಟಿ ರೂ ಪಾವತಿಸಲಿದ್ದಾರೆ ಎಂದು ತಿಳಿಸಲಾಗಿತ್ತು.

Write A Comment