ರಾಷ್ಟ್ರೀಯ

ಪಚೌರಿಗೆ ‘ಟೆರಿ’ ಮಹಾ ನಿರ್ದೇಶಕ ಸ್ಥಾನದಿಂದ ಗೇಟ್ ಪಾಸ್

Pinterest LinkedIn Tumblr

rkpachouriನವದೆಹಲಿ (ಏ.21): ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಆರ್.ಕೆ. ಪಚೌರಿಗೆ ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟೆರಿ)ಯ ಆಡಳಿತ ಮಂಡಳಿ ಮಹಾ ನಿರ್ದೇಶಕ ಸ್ಥಾನದಿಂದ ಕೊನೆಗೂ ಗೇಟ್’ಪಾಸ್ ಕೊಟ್ಟಿದೆ, ಇದರಿಂದಾಗಿ ಮೂರು ದಶಕಗಳೊಂದಿಗೆ ಹೊಂದಿದ್ದ ಸುಧೀರ್ಘ ಸಂಬಂಧ ಅಂತ್ಯಗೊಂಡಿದೆ.
75 ವರ್ಷದ ಆರ್.ಕೆ. ಪಚೌರಿಯವರ ಸದಸ್ಯತ್ವ ಈ ವರ್ಷದ ಮಾರ್ಚ್ 31 ಕ್ಕೆ ಕೊನೆಗೊಂಡಿತ್ತು. ಇಂದು ಸಭೆ ಸೇರಿದ ಟೆರಿಯ ಆಡಳಿತ ಮಂಡಳಿ ಮೂರು ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಪ್ರಕರಣಗಳು ಇರುವ ಕಾರಣ ಸದಸ್ಯತ್ವವನ್ನು ನವೀಕರೀಸದೆ ಸದಸ್ಯತ್ವಕ್ಕೆ ಮುಕ್ತಿ ನೀಡಿದೆ. ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಮಂಡಳಿ ತಿಳಿಸಿದೆ.
ಪಚೌರಿಯವರು 2015, ಫೆಬ್ರವರಿ ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆಯ ಅಂತರ ಸರ್ಕಾರಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಮೇಲೆ ‘ಟೆರಿ’ಯ ಮುಖ್ಯಸ್ಥರಾಗಿದ್ದರು. ಟೆರಿಯಲ್ಲಿ 1986 ರಲ್ಲಿ ವೃತ್ತಿ ಆರಂಭಿಸಿ ಹಲವು ಪ್ರಮುಖ ಹುದ್ದೆಗಳಲ್ಲಿ ಅಧಿಕಾರ ಅನುಭವಿಸಿದ್ದರು.
2015 ರಲ್ಲಿ 29 ವರ್ಷ ವಯಸ್ಸಿನ ಮಾಜಿ ಸಂಶೋಧಕರೊಬ್ಬರು ಪಚೌರಿ ಅವರ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದ ನಂತರ ಮಾರ್ಚ್ 1, 2016 ರಲ್ಲಿ ದೆಹಲಿ ಪೊಲೀಸರು ಪಚೌರಿ ವಿರುದ್ಧ ಚಾರ್ಚ್ ಶೀಟ್ ದಾಖಲಿಸಿದ್ದರು.

Write A Comment