ರಾಷ್ಟ್ರೀಯ

ನಕ್ಸಲರ ಅಟ್ಟಹಾಸ, ಮೂವರು ಯೋಧರಿಗೆ ಗಾಯ

Pinterest LinkedIn Tumblr

Naxalರಾಯಪುರ (ಪಿಟಿಐ): ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ನೆಲ ಬಾಂಬ್ ಸ್ಫೋಟ ಘಟನೆಯಲ್ಲಿ ಅಧಿಕಾರಿಯೊಬ್ಬರು ಸೇರಿದಂತೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(ಸಿಆರ್‌ಪಿಎಫ್) ಮೂವರು ಯೋಧರು ಸೋಮವಾರ ಗಾಯಗೊಂಡಿದ್ದಾರೆ.
ಚಿಂತಾಗುಫಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಿಆರ್‌ಪಿಎಫ್‌ ಯೋಧರು ರೂಪಿಸುವ ಪಡೆಯು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಚಿಂತಾಗುಫಾ– ಬುರ್ಕಾಪಾಲ್‌ ನಡುವೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಸುಕ್ಮಾ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ತಿಳಿಸಿದ್ದಾರೆ.
ಇನ್‌ಸ್ಫೆಕ್ಟರ್ ರವಿ ಸಿಂಗ್ ಹಾಗೂ ಕಾನ್‌ಸ್ಟೇಬಲ್ ಎಸ್.ಬಾಬು ಅವರು ಗಾಯಗೊಂಡಿದ್ದಾರೆ. ಮತ್ತೊಬ್ಬ ಕಾನ್‌ಸ್ಟೇಬಲ್ ಅರ್ಜುನ್ ರಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

Write A Comment