ರಾಷ್ಟ್ರೀಯ

ನಿರಂತರ ಹಿಂಸೆ ನೀಡುತ್ತಿದ್ದ ಪತಿಯನ್ನೇ ಕೊಂದು ಪೊಲೀಸರಿಗೆ ಶರಣಾದ ಉಪನ್ಯಾಸಕಿ

Pinterest LinkedIn Tumblr

muಹೈದರಾಬಾದ್,ಏ.16- ನಿರಂತರ ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದ ಪತ್ನಿ ತನ್ನ ಪತಿಯನ್ನು ಇರಿದು ಕೊಂದು ಚಾಕು ಸಹಿತ ಪೊಲೀಸರಿಗೆ ಶರಣಾಗಿರುವ ಘಟನೆ ಇಲ್ಲಿನ ನಲ್ಲಿಕುಂಟ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದಿದೆ. 42 ವರ್ಷದ ವಿಜಯ ಲಕ್ಷ್ಮಿ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ನಿರುದ್ಯೋಗಿಯಾಗಿದ್ದ ಪತಿ ಗಂಗಾಧರ ಪ್ರತಿದಿನ ಅವಳಿಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ.

ಇಂದು ಬೆಳಗಿನ ಜಾವ 3 ಗಂಟೆ ವೇಳೆಗೆ ಚಾಕುವಿನಿಂದ ಪತಿಯ ಕಿಬ್ಬೊಟ್ಟಿಎಗೆ ಇರಿದ ವಿಜಯಲಕ್ಷ್ಮಿ ನೇರವಾಗಿ ಠಾಣೆಗೆ ಬಂದು ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯ ಶೀಲದ ಬಗ್ಗೆ ಅನುಮಾನವಿದ್ದ ಪತಿ ಗಂಗಾಧರ ದಿನವೂ ಅವಳನ್ನು ಹೊಡೆಯುತ್ತಿದ್ದ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Write A Comment