ಮನೋರಂಜನೆ

ಹಿರಿಯ ನಟ ದಿಲೀಪ್ ಕುಮಾರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

Pinterest LinkedIn Tumblr

dilip-kumar

ಮುಂಬಯಿ: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅವರು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಮುಂಬಯಿಯಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಗ್ಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ದಿಲೀಪ್ ಕುಮಾರ್ ಅವರನ್ನು ಬೆಳಗ್ಗಿನ ಜಾವ ಸುಮಾರು 2.30 ರ ವೇಳೆಗೆ ಜ್ವರ ಕಾಣಿಸಿಕೊಂಡಿತು. ನಂತರ ಸ್ವಲ್ಪ ಸಮಯದಲ್ಲೇ ವಾಂತಿ ಮಾಡಿಕೊಂಡಿದ್ದಾರೆ.

ನ್ಯೂಮೋನಿಯಾದಿಂದ ಬಳಲುತ್ತಿರುವ ದಿಲೀಪ್ ಕುಮಾರ್ ಅವರ ದೇಹದಲ್ಲಿ ಬಿಳಿರಕ್ತ ಕಣಗಳ ಪ್ರಮಾಣ ಕಡಿಮೆ ಇದ್ದುದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಲೀಲಾವತಿ ಆಸ್ಪತ್ರೆ ವೈದ್ಯ ಡಾ. ಜಲೀಲ್ ಪರಿಕ್ಕರ್ ಹೇಳಿದ್ದಾರೆ.

93 ವರ್ಷ ವಯಸ್ಸಿನ ದಿಲೀಪ್ ಕುಮಾರ್ ಅವರಿಗೆ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸತತ ಆರು ದಶಕಗಳ ಕಾಲ ಬಾಲಿವುಡ್ ನಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದ ದಿಲೀಪ್ ಕುಮಾರ್, ಮಧುಮತಿ, ದೇವದಾಸ್, ಮೊಗಲ್-ಇ ಅಜಮ್, ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು.

Write A Comment