ಮನೋರಂಜನೆ

ಸಂಜಯ್ ದತ್ ಮನೆಯಲ್ಲಿ ಪಾರ್ಟಿಯಿಂದ ಕಿರಿಕಿರಿ: ಪೊಲೀಸರ ಮೊರೆ ಹೋದ ಸ್ಥಳೀಯರು

Pinterest LinkedIn Tumblr

Sanjay Dutt and Manyata

ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ತಮ್ಮ ಮನೆ ಟೆರೇಸ್ ಮೇಲೆ ಪಾರ್ಟಿ ಆಯೋಜಿಸಿ, ಬೆಳಗ್ಗಿನ ಜಾವದ ವರೆಗೂ ಹಾಕಿದ್ದ ಮ್ಯೂಸಿಕ್ ನಿಂದಾಗಿ ನೆರೆಹೊರೆಯವರಿಗೆ ಕಿರಿಕಿರಿ ಉಂಟಾಗಿ ಶಬ್ದ ನಿಲ್ಲಿಸಲು ಪೊಲೀಸರ ಮೊರ ಹೋದ ಘಟನೆ ನಡೆದಿದೆ.

ಸಂಜಯ್‌ ದತ್‌‌ ಜೈಲಿಗೆ ಹೋಗುವುದಕ್ಕೆ ಮುಂಚೆ ಮೋಜು, ಪಾರ್ಟಿಗಳಲ್ಲಿ ಕಾಲ ಕಳೆಯುತ್ತಿದ್ದರು. ಜೈಲಿಂದ ಬಿಡುಗಡೆಯಾದ ಮೇಲೆ ಕೂಡ ಹಿಂದಿನ ಜೀವನಶೈಲಿಗೇ ಮತ್ತೆ ಒಗ್ಗಿಹೋಗಿದ್ದಾರೆ. ಹೀಗಾಗಿ ಸಂಜಯ್ ದತ್ ಮತ್ತು ಪತ್ನಿ ಮಾನ್ಯತಾ ಮುಂಬಯಿಯ ತಮ್ಮ ಪಾಲಿ ಹಿಲಿ ನಿವಾಸದ ಟೆರೇಸ್‌ನಲ್ಲಿ ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದರು.

ಸೆಲೆಬ್ರಿಟಿ ದಂಪತಿ ಮುಂಜಾನೆವರೆಗೆ ಕರ್ಕಶ ಶಬ್ದದೊಂದಿಗೆ ಮ್ಯೂಸಿಕ್ ಹಾಕಿದ್ದು ನೆರೆಹೊರೆಯವರಿಗೆ ಕಿರಿಕಿರಿ ಉಂಟುಮಾಡಿತ್ತು. ರಾತ್ರಿ 2.15ರವರೆಗೆ ಸಂಗೀತದ ಆಲಾಪ ನಿಲ್ಲದಿದ್ದಾಗ ಪಕ್ಕದ ನಿವಾಸಿಗಳಾದ ಡಾ. ಅಮಿತವ್ ಶುಕ್ಲಾ ಪೊಲೀಸರ ಮೊರೆ ಹೋದರು. ಕೊನೆಗೆ ಮುಂಜಾನೆ 4 ಗಂಟೆಗೆ ಪೊಲೀಸರು ಸಂಗೀತದ ಸದ್ದನ್ನು ಅಡಗಿಸುವಲ್ಲಿ ಯಶಸ್ವಿಯಾದರು

Write A Comment