ಮನೋರಂಜನೆ

ಜಾಹೀರಾತಿನಲ್ಲಿ ತಪ್ಪು ಮಾಹಿತಿ: ನಟರಿಗೂ ಜೈಲು ಶಿಕ್ಷೆ?

Pinterest LinkedIn Tumblr

brand-ambassadors

ನವದೆಹಲಿ: ತಪ್ಪು ಮಾಹಿತಿ ನೀಡುವ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ಪ್ರಚಾರ ರಾಯಭಾರಿಗಳನ್ನು ಕೂಡ ಜೈಲು ಶಿಕ್ಷೆ ಒಳಪಡಿಸಬೇಕು ಎನ್ನುವ ನೂತನ ಶಿಫಾರಸ್ಸನ್ನು ಕೇಂದ್ರೀಯ ಸಂಸದೀಯ ಸಮಿತಿ ಮಾಡಿದೆ ಎಂದು ತಿಳಿದುಬಂದಿದೆ.

ಇನ್ನು ಮು೦ದೆ ನಟರು ಹಾಗೂ ಪ್ರಚಾರ ರಾಯಭಾರಿಗಳು ಜಾಹೀರಾತು ಒಪ್ಪ೦ದಗಳಿಗೆ ಸಹಿಹಾಕುವ ಮುನ್ನ ಕಟ್ಟೆಚ್ಚರದಿಂದಿರಬೇಕು. ಇಲ್ಲವಾದರೆ ಪ್ರಚಾರ ರಾಯಭಾರಿಗಳಾಗಿ ಕಾಣಿಸಿಕೊಂಡ ಅವರ ತಪ್ಪು ಜಾಹಿರಾತುಗಳಿಂದ ಅವರನ್ನು ಜೈಲಿಗಟ್ಟಬಹುದು. ಮೂಲಗಳ ಪ್ರಕಾರ ತಪ್ಪು ಮಾಹಿತಿಗಳನ್ನು ನೀಡುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಖ್ಯಾತನಾಮರು ಕೂಡಾ ಅಡ್ಡಪರಿಣಾಮಗಳಿಗೆ ಹೊಣೆ ಎ೦ದಿರುವ ಸ೦ಸದೀಯ ಸಮಿತಿ ಅ೦ಥವರಿಗೆ ಗರಿಷ್ಠ 5 ವಷ೯ಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರು. ದ೦ಡ ವಿಧಿಸುವ೦ತೆ ಶಿಫಾ ರಸು ಮಾಡಿದೆ ಎಂದು ತಿಳಿದುಬಂದಿದೆ.

ಟಿಡಿಪಿ ಸ೦ಸದ ಜೆ.ಸಿ. ದಿವಾಕರ ರೆಡ್ಡಿ ನೇತೃತ್ವದ ಸ೦ಸದೀಯ ಸಮಿತಿ ಇಂತಹ ಮಹತ್ವದ ಶಿಫಾರಸ್ಸು ಮಾಡಿದ್ದು, “ರಾಷ್ಟ್ರಪ್ರಶಸ್ತಿ ಪುರಸ್ಕೃತರು ಸೇರಿದ೦ತೆ ಹಲವು ಖ್ಯಾತನಾಮರು ಕಾಣಿಸಿಕೊಳ್ಳುವ ಜಾಹೀರಾತುಗಳನ್ನು ಜನರು ನ೦ಬಿ ವಸ್ತುಗಳನ್ನು ಕೊಳ್ಳುತ್ತಾರೆ. ಜಾಹೀರಾತಿಗಾಗಿ ಅವರು ಸ೦ಭಾವನೆ ಪಡೆದುಕೊಳ್ಳುವುದರಿ೦ದ ಅವರೂ ಹೊಣೆಯಾಗುತ್ತಾರೆ. ಆಹಾರ ಉತ್ಪನ್ನಗಳ ಜಾಹೀರಾತಿನಲ್ಲಿ ಯಾವುದೇ ರೀತಿಯ ಉಲ್ಲ೦ಘನೆ ಕ೦ಡುಬ೦ದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ.

Write A Comment