ರಾಷ್ಟ್ರೀಯ

ಮಲ್ಯ ಪಾಸ್‌ಪೋರ್ಟ್‌ ರದ್ದಿಗೆ ಇಡಿ ಸೂಚನೆ

Pinterest LinkedIn Tumblr

malllyyyನವದೆಹಲಿ (ಪಿಟಿಐ): ಸಾಲ ಮರು ಪಾವತಿಸುವಲ್ಲಿ ವಿಫಲರಾಗಿರುವ ಉದ್ಯಮಿ ವಿಜಯ ಮಲ್ಯ ಅವರ ಪಾಸ್‌ಪೋರ್ಟ್‌ ರದ್ದುಪಡಿಸುವಂತೆ ಇಲ್ಲಿನ ಸ್ಥಳೀಯ ಪಾಸ್‌ಪೋರ್ಟ್‌ ಕಚೇರಿಗೆ ಜಾರಿ ನಿರ್ದೇಶನಾಲಯ (ಇಡಿ)ಸೂಚಿಸಿದೆ.
ಐಡಿಬಿಐ ಬ್ಯಾಂಕ್‌ನಲ್ಲಿ 900 ಕೋಟಿ ರೂಪಾಯಿ ಸಾಲ ಪಡೆದಿರುವ ವಿಜಯ್‌ ಮಲ್ಯ ಅದನ್ನು ಮರು ಪಾವತಿಸುವಲ್ಲಿ ವಿಫಲರಾಗಿದ್ದಾರೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮೂರು ಸಲ ಸಮನ್ಸ್‌ ನೀಡಿದ್ದರೂ ಮಲ್ಯ ವಿಚಾರಣೆಗೆ ಹಾಜರಾಗಿರಲಿಲ್ಲ .
ಇದರಿಂದ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಅವರು ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗಲೇ ಬೇಕಾಗಿದೆ.

Write A Comment