ರಾಷ್ಟ್ರೀಯ

ಕೇರಳದಲ್ಲಿ ರಾತ್ರಿ ಪಟಾಕಿ ನಿಷೇಧ: ಹೈಕೋರ್ಟ್

Pinterest LinkedIn Tumblr

kollammmmmಕೊಲ್ಲಂ (ಪಿಟಿಐ): ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್‌ನ ಪುಟ್ಟಿಂಗಲ್‌ ದೇವಾಲಯದಲ್ಲಿ ಸಂಭವಿಸಿದ ಸಿಡಿಮದ್ದು ದುರಂತಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ರಾಜ್ಯದ ಎಲ್ಲ ದೇವಾಲಯಗಳಲ್ಲಿ ರಾತ್ರಿ ವೇಳೆ ಸಿಡಿಮದ್ದು ಪ್ರದರ್ಶನವನ್ನು ನಿಷೇಧಿಸಿದೆ.
ಭಾರೀ ಸದ್ದಿನ ಸಿಡಿಮದ್ದುಗಳನ್ನು ನಿಷೇಧಿಸಬೇಕು ಎಂದು ಕೋರಿ ಕೇರಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ರಾತ್ರಿ ಸಮಯದಲ್ಲಿ ಕೇರಳದ ಎಲ್ಲ ದೇವಾಲಯಗಳಲ್ಲಿ ಭಾರೀ ಸದ್ದಿನ ಪಟಾಕಿಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಪುಟ್ಟಿಂಗಲ್‌ ದೇವಾಲಯದಲ್ಲಿ ಸಂಭವಿಸಿದ ಸಿಡಿಮದ್ದು ದುರಂತಕ್ಕೆ 120 ಜನರು ಬಲಿಯಾಗಿದ್ದಾರೆ. ದೇವಾಲಯದ ಆವರಣದಲ್ಲಿದ್ದ ಪಟಾಕಿ ಸಂಗ್ರಹದ ಕೊಠಡಿಗೆ ಬೆಂಕಿ ತಗುಲಿ ಈ ದುರಂತ ಸಂಭವಿಸಿತ್ತು.

Write A Comment